ಮತ್ತೊಬ್ಬ ಸ್ವಾಮೀಜಿಯ ರಾಸಲೀಲೆ ಬಯಲು: ಚಾಲಕನಿಂದಲೇ ವಿಡಿಯೋ ವೈರಲ್…

0
4122
another-swamiji-sex-scandal-video-viral

ಕೊಪ್ಪಳ,ಡಿ,7,2017(www.justkannada.in): ನಿತ್ಯಾನಂದ ಸ್ವಾಮೀಜಿ ರಾಸಲೀಲೆ, ಯಲಹಂಕದ ಮದ್ದೇವಣ್ಣಪುರ ಮಠದ ಕಿರಿಯ ಸ್ವಾಮೀಜಿಯೊಬ್ಬರ ಪಲ್ಲಂಗ ಪುರಾಣದ ರೀತಿಯಲ್ಲೇ ಇದೀಗ ಮತ್ತೊಬ್ಬ ಸ್ವಾಮೀಜಿಯ ಕಾಮಪುರಾಣ ಬಯಲಾಗಿದೆ. ಸ್ವಾಮೀಜಿಯ ಕಾರು ಚಾಲಕನೇ  ವೀಡಿಯೋ ತುಣಕನ್ನು ಬಿಡುಗಡೆ ಮಾಡಿದ್ದಾನೆ.

 ಗಂಗಾವತಿಯ ಕಲ್ಮಠದ  ಕೊಟ್ಟೂರು ಸ್ವಾಮೀಜಿಗಳ ಕಾಮಪುರಾಣದ ರಾಸಲೀಲೆ ವೀಡಿಯೋ ತುಣುಕೊಂದು ಇದೀಗ ವೈರಲ್ ಆಗಿದೆ. ಲಾಡ್ಜ್ ನಲ್ಲಿ ಸ್ವಾಮೀಜಿ ಯುವತಿಯೊಂದಿಗೆ ಅರೆನಗ್ನಾವಸ್ಥೆಯಲ್ಲಿರುವ ವೀಡಿಯೋ ತುಣಕನ್ನು ಸ್ವಾಮೀಜಿ ಕಾರ್ ಚಾಲಕ ಮಲ್ಲಯ್ಯ ಬಿಡುಗಡೆ ಮಾಡಿದ್ದಾರೆ.

ಗಂಗಾವತಿಯ ಕಲ್ಮಠದ ಮಠದ ಹೆಸರಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ನಡೀತಿವೆ. ಸಂಸ್ಥೆಯಲ್ಲಿ ಕೆಲಸ ಮಾಡೋ ಮಹಿಳೆಯರು, ಟೀಚರ್, ಲೈಬ್ರೇರಿಯನ್ ಹೀಗೆ ಎಲ್ಲರ ಜೊತೆಯಲ್ಲೂ ರಾಸಲೀಲೆ ನಡೆಸಿದ್ದಾರೆ ಎಂದು ಕಾರು ಚಾಲಕ ಮಲ್ಲಯ್ಯ ಆರೋಪಿಸಿದ್ದಾರೆ.  ಸ್ವಾಮೀಜಿ ಮಹಿಳೆಯೊಂದಿಗೆ ಲಾಡ್ಜ್  ನಲ್ಲಿರುವ ವಿಡಿಯೋ ವೈರಲ್ ಆಗಿರುವುದು ಭಕ್ತರಲ್ಲಿ ಅಸಮಾಧಾನ ಉಂಟುಮಾಡಿದೆ.

ಈ ಸಂಬಂಧ ಸ್ವಾಮೀಜಿಯಿಂದ ನನಗೆ ಜೀವ ಬೆದರಿಕೆಯಿದೆ ಎಂದು ಆರೋಪಿಸಿ ಚಾಲಕ ಮಲ್ಲಯ್ಯ ಸ್ವಾಮೀಜಿ ವಿರುದ್ಧ ಪೊಲೀಸರಿಗೆ ದೂರು  ನೀಡಿದ್ದಾರೆ. ಮಲ್ಲಯ್ಯನನ್ನು ಕೆಲಸದಿಂದ ತೆಗೆದು ಹಾಕುವ ವಿಚಾರದಲ್ಲಿ ಸ್ವಾಮೀಜಿ ಹಾಗೂ ಚಾಲಕನ ನಡುವೆ ಭಿನ್ನಾಭಿಪ್ರಾಯುಂಟಾಗಿದೆ. ಇದೇ ವಿಷಯ ದೃಶ್ಯಾವಳಿ ಬಹುರಂಗವಾಗಲು ಕಾರಣ ಎನ್ನಲಾಗಿದೆ.

 

Key words: Another –Swamiji- sex scandal-Video –  Viral