ಬೆಂಗಳೂರಿನ ರಸ್ತೆ ಗುಂಡಿಗೆ ಮತ್ತೊಬ್ಬ ಬೈಕ್ ಸವಾರ ಬಲಿ

0
672

ಬೆಂಗಳೂರು:ಅ-12:(www.justkannada.in) ರಾಜಧಾನಿ ಬೆಂಗಳೂರಿನ ಮೃತ್ಯುಕೂಪದ ರಸ್ತೆಗುಂಡಿಗಳು ಮತ್ತೋರ್ವ ಬೈಕ್ ಸವಾರನನ್ನು ಬಲಿತೆಗೆದುಕೊಂಡಿದೆ. ಬಿಜಿಎಸ್ ಆಸ್ಪತ್ರೆ ಮುಖ್ಯ ಗೇಟ್ ಬಳಿ ರಸ್ತೆಗುಂಡಿ ತಪ್ಪಿಸಲು ಹೋದ ಬೈಕ್ ಸವಾರ ಇನ್ನೊಂದು ರಸ್ತೆಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ.

ಮೃತ ವ್ಯಕ್ತಿಯನ್ನು 20 ವರ್ಷದ ತೇಜಸ್ವಿ ಗೌಡ ಎಂದು ಗುರುತಿಸಲಾಗಿದೆ. ಹೆಚ್ ಗೊಲ್ಲಹಳ್ಳಿಯ ನಿವಾಸಿಯಾದ ತೇಜಸ್ವಿ ಗೌಡ ಬೆಳಿಗ್ಗೆ 7.15ರ ಸುಮಾರಿಗೆ ಉತ್ತರಹಳ್ಳಿ ಮುಖ್ಯರಸ್ತೆಯ ಮೂಲಕ ತನ್ನ ಕೆಲಸದ ನಿಮಿತ್ತವಾಗಿ ವೇಗವಾಗಿ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಿಜಿಎಸ್ ಮುಖ್ಯ ಗೇಟ್ ಬಳಿ ರಸ್ತೆಗುಂಡಿಯನ್ನು ತಪ್ಪಿಸಲು ಹೋಗಿ ಲಾರಿಗೆ ಡಿಕ್ಕಿಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ವಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಸಾವನ್ನಪ್ಪಿದ್ದಾರೆ.

ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ ಟ್ರಾಫಿಕ್ ಪೊಲೀಸರು ಹೇಳುವ ಪ್ರಕಾರ ತೇಜಸ್ವಿ ಗೌಡ ರಸ್ತೆಗುಂಡಿ ತಪ್ಪಿಸಲು ಹೋಗಿ ಸಾವನ್ನಪ್ಪಿಲ್ಲವಂತೆ. ವೇಗವಾಗಿ ಬೈಕ್ ನಲ್ಲಿ ಬರುತ್ತಿದ್ದ ತೇಜಸ್ವಿ ಗೌಡ ಅವರಿಗೆ ಲಾರಿ ಡಿಕ್ಕಿಹೊಡೆದಿದೆ. ಇದಕ್ಕೆ ಲಾರಿ ಚಾಲಕನ ಅಜಾಗರೂಕತೆಯೇ ಕಾರಣ. ಬೈಕ್ ಸವಾರ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ವಾದಿಸುತ್ತಾರೆ.

ತೇಜಸ್ವಿ ಗೌಡ ಸುಗ್ಗಿ ಕ್ಯಾಟರಿಂಗ್ ನಲ್ಲಿ ಕೆಲಸಮಾಡುತ್ತಿದ್ದರು. ಎಂದಿನಂತೆ ಆಹಾರ ವಿತರಣೆಗಾಗಿ ತೆರಳುತ್ತಿದ್ದ ವೇಳೆ ಈ ಪಘಾತ ಸಂಭವಿಸಿದೆ. ಲಾರಿ ಚಾಲಕನ ಅಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದ್ದು, ಲಾರಿಚಾಲಕನನ್ನು ಬಂದಿಸಲಾಗಿದ್ದು, ಲಾರಿ ಹಾಗೂ ಬೈಕ್ ಎರಡನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ANOTHER LIFE LOST, ON CITY ROADS

A 20-year-old bike rider was killed after he came under the wheels of a speeding lorry on the Uttarahalli main road in Kengeri traffic police station limits on Wednesday morning at around 7.15 am. The bike rider, reportedly unable to manoeuvre his bike on a road allegedly due to a hump near BGS Hospital’s main gate, died as a result. However, the traffic police refuted the theory and said negligence on part of the lorry driver was the cause for the accident.