ಮಂಡ್ಯ, ಫೆಬ್ರವರಿ 13,2018(www.justkannada.in); ಮಂಡ್ಯ ಜಿಲ್ಲೆಯಲ್ಲಿ ಚುಚ್ಚುಮದ್ದಿಗೆ ಮತ್ತೊಂದು ಮಗು ಬಲಿಯಾಗಿರುವ ಘಟನೆ ನಡೆದಿದೆ.Another- child'- death- injected -Mandya.

ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದ ಸಂತೋಷ್, ಹೇಮಾ ದಂಪತಿಯ 2 ತಿಂಗಳ ಕೂಸು ಮೃತಪಟ್ಟಿದೆ. ಮಗುವಿಗೆ ಜ್ವರ ಶೀತವಿದ್ದ ಕಾರಣ ಗುರುವಾರ ಅಗಸನಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಹಾಕಲಾಗಿತ್ತು.Another- child'- death- injected -Mandya.

ಚುಚ್ಚುಮದ್ದು ಕೊಟ್ಟ ಕೆಲವು ಗಂಟೆಗಳ ನಂತರ ಮಗು ಅನಾರೋಗ್ಯ ಈಡಾಗಿದೆ. ಭಾನುವಾರ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮಗುವನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಫಲಕಾರಿಯಾಗದೇ ರಾತ್ರಿ ಆಸ್ಪತ್ರೆಯಲ್ಲಿಯೇ ಪುಟಾಣಿ ಕೊನೆ ಯುಸಿರೆಳೆದಿದೆ.

ಮಗುವಿನ ಪೋಷಕರು ಚುಚ್ಚುಮದ್ದಿನಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಆದರೆ ಆರೋಪವನ್ನು ತಳ್ಳಿ ಹಾಕಿರುವ ವೈದ್ಯರು ನಿಮೋನಿಯಾದಿಂದ ಮಗು ಸಾವನ್ನಪ್ಪಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಂಚನಾಮೆ ನಡೆಸದೇ ಮಗುವಿನ ಶವ ಪೋಷಕರಿಗೆ ಹಸ್ತಾಂತರಿಸಿದ್ದು, ವೈದ್ಯರ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಳೆದ ಎರಡು ದಿನಗಳ ಹಿಂದೆ ಇದೇ ಜಿಲ್ಲೆಯ ಚಿಂದಗಿರಿ ದೊಡ್ಡಿಯಲ್ಲಿ ಶುಕ್ರವಾರ ಇಬ್ಬರು ಮಕ್ಕಳು ಚುಚ್ಚುಮದ್ದಿನಿಂದ ಸಾವನ್ನಪ್ಪಿದ್ದರು. ಏಳು ಮಕ್ಕಳು ಅಸ್ವಸ್ಥರಾಗಿದ್ದರು.

key words : Another- child’- death- injected -Mandya.