ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ: ಪ್ರತಿಭಟನಾ ನಿರತ ಇಬ್ಬರು ಅಸ್ವಸ್ಥ…

0
133
Anganwadi workers –strike- protest -ill

ಬೆಂಗಳೂರು,ಮಾ,21,2017(www.justkannada.in):  ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು  ನಡೆಸುತ್ತಿರುವ ಅಹೋರಾತ್ರಿ ಧರಣಿ ತೀವ್ರ ಸ್ವರೂಪ ಪಡೆದಿದ್ದು, ಧರಣಿನಿರತ ಇಬ್ಬರು ಕಾರ್ಯಕರ್ತೆಯರು ಅಸ್ವಸ್ಥಗೊಂಡಿದ್ದಾರೆ.

ಸುನಂದ ಹಾಗೂ ಮಂಜುಳಾ ಎಂಬುವವರು ಅಸ್ವಸ್ಥಗೊಂಡಿದ್ದು, ಅವರನ್ನ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಪ್ರೀಡಂ ಪಾರ್ಕ್  ಕಳೆದ 19 ಗಂಟೆಗಳ ಅವಧಿಯಿಂದ ಹೋರಾಟ ನಡೆಯುತ್ತಿದ್ದು, ಸ್ಪಂದಿಸದ ಆಡಳಿತದ ವಿರುದ್ಧ ಕಾರ್ಯಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಿಂದ 10,000 ಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರು ಆಗಮಿಸಿದ್ದು, ನಿನ್ನೆ ರ್ಯಾಲಿ ನಡೆಸಿ, ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಕೈಗೊಂಡಿದ್ದರು.ಆದರೆ, ಸರ್ಕಾರದೊಂದಿಗಿನ ಮಾತುಕತೆ ಮುರಿದು ಬಿದ್ದ ಕಾರಣ, ಹೋರಾಟ ಮುಂದುವರೆಸಿದ್ದಾರೆ. ರಾತ್ರಿ ರಸ್ತೆ ಬಂದ್ ಮಾಡಿದ ಕಾರ್ಯಕರ್ತೆಯರು ಅಲ್ಲೇ ಮಲಗಿದ್ದಾರೆ.ಬ್ಯಾಗ್, ಸೀರೆಗಳನ್ನೇ ದಿಂಬು, ಹೊದಿಕೆ ಮಾಡಿಕೊಂಡು ಇಡೀ ರಾತ್ರಿ ರಸ್ತೆಯಲ್ಲೇ ಮಲಗಿದ್ದಾರೆ. ಸಣ್ಣ ಮಕ್ಕಳನ್ನು ಕರೆತಂದಿದ್ದ ಮಹಿಳೆಯರು ತೊಂದರೆ ಅನುಭವಿಸುವಂತಾಗಿತ್ತು.

ಇನ್ನು ಧರಣಿ ನಿರತರಿಗೆ ನೀರಿನ ಕೊರತೆ ಶೌಚಾಲಯಕೊರತೆ ಎದುರಾಗಿದೆ.ಸ್ಥಳಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ನೀರಿನ ಸೌಲಭ್ಯ ಸೌಕರ್ಯವನ್ನು ಒದಗಿಸುವ ಭರವಸೆ ನೀಡಿದ್ದಾರೆ.

ಅಲ್ಲದೆ ಸರ್ಕಾರ ಮಹಿಳೆಯರ ಕಣ್ಣಲ್ಲಿ ನೀರು ತರಿಸಬಾರದು ಅವರ ಬೇಡಿಕೆಯನ್ನ ಈಡೇರಿಸಬೇಕು ಸದನದಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.

Key words: Anganwadi workers –strike- protest -ill