ಅನಂತ್ ನಾಗ್- ಗಾಯತ್ರಿ ದಂಪತಿ ಪುತ್ರಿ ವಿವಾಹ ನಡೆಯಿತು

0
1054

ananth-nag-daughter-marriage-bangalore-bhants-bhavana

ಬೆಂಗಳೂರು : ಕನ್ನಡದ ಹಿರಿಯ ನಟ  ಅನಂತ್ ನಾಗ್ – ಗಾಯತ್ತಿ ದಂಪತಿಯ ಪುತ್ರಿಯ ವಿವಾಹ ಭಾನುವಾರ ಅದ್ದೂರಿಯಾಗಿ ನಡೆಯಿತು. ಅದಿತಿ ಹಾಗೂ ವಿವೇಕ್ ಶೆಟ್ಟಿ ಹಸಮಣೆ ಏರುವ ಮೂಲಕ ಸತಿಪತಿಗಳಾದರು.

ನಗರದ ಬಂಟ್ಸ್ ಸಮುದಾಯ ಭವನದಲ್ಲಿ ಭಾನುವಾರ ಬೆಳಗ್ಗೆ ವಿವಾಹ ಮಹೋತ್ಸವ ನಡೆಯಿತು. ಬಳಿಕ ಸಂಜೆ ಅದ್ದೂರಿ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿತ್ತು. ಈ ಸಮಾರಂಭಕ್ಕೆ ಕನ್ನಡ ಸಿನಿಮಾ ರಂಗದ ತಾರೆಯರ ದಂಡೇ ತೆರೆದಿತ್ತು. ಅದಿತಿ ಹಾಗೂ ಪುತ್ತೂರು ವಿಟ್ಲ ಸಮೀಪದ ವಿವೇಕ್ ಶೆಟ್ಟಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಒಟ್ಟಾಗಿಯೇ ಕೆಲಸ ಮಾಡುತ್ತಿದ್ದರು. ಆಗಲೇ ಇವರ ಸ್ನೇಹ ಪ್ರೇಮಕ್ಕೆ ತಿರುಗಿದ್ದು. ಎರಡು ಕುಟುಂಬಗಳ ಸಮ್ಮತಿಯಿಂದಲೇ ಮದುವೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜಯನಗರದ ಬಂಟ್ಸ್ ಸಮುದಾಯ ಭವನ ಈ ಅದ್ದೂರಿ ಮದುವೆಗೆ ಸಾಕ್ಷಿಯಾಯಿತು.

ಮದುವೆ ಆರತಕ್ಷತೆ ಸಮಾರಂಭಕ್ಕೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ನಿರ್ದೇಶಕ ನಾಗಭರಣ, ಯೋಗ್ರಾಜ್ ಭಟ್, ಭಾರತೀ ವಿಷ್ಣುವರ್ಧನ್, ಅನಿರುದ್ಧ್ , ಪ್ರವೀಣಜೋಷಾಯ್, ಸುಂದರರಾಜ್ ಆಗಮಿಸಿ ನವ ದಂಪತಿಗೆ ಶುಭ ಕೋರಿದರು.