ರಾಜ್ಯಕ್ಕೆ ಅಮಿತ್ ಶಾ, ರಾಹುಲ್ ಗಾಂಧಿ ಬರೋದ್ ಬೇಡ ಅನ್ನೋಕೆ ನಾನ್ಯಾರು?- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ……

0
597
Amit Shah- Rahul Gandhi –come-former prime minister – hd devegowda

ಚಿಕ್ಕಮಗಳೂರು,ಆ,12,2017(www.justkannada.in): ರಾಜ್ಯಕ್ಕೆ ಅಮಿತ್ ಶಾ, ರಾಹುಲ್ ಗಾಂಧಿ ಬರೋದ್ ಬೇಡ ಅನ್ನೋಕೆ ನಾನ್ಯಾರು. ಅವರು ಬರೋದಕ್ಕೆ ವೀಸಾ ಪಡೆದು ಬರಬೇಕೆ ? ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪ್ರಶ್ನಿಸಿದರು.Amit Shah- Rahul Gandhi –come-former prime minister – hd devegowda

ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ  ಮಾತನಾಡಿದ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ,  224 ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿ ಸ್ಪರ್ಧಿಸ್ತಾರೆ. ಆಗಸ್ಟ್ 17 ರಿಂದ ಹೈದ್ರಾಬಾದ್-ಕರ್ನಾಟಕ ಪ್ರವಾಸ ಮಾಡ್ತೇನೆ. ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜನರು ಯೂಸ್ ಅಂಡ್ ಥ್ರೋ ಮಾಡುತ್ತಾರೆ. ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲಿ ಆಮೇಲೆ ನಮ್ದು ಬಿಡುಗಡೆ ಮಾಡುತ್ತೇವೆ ಎಂದರು.

ರೈತರ ಬಗ್ಹೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಕಿಡಿ ಕಾರಿದ ಹೆಚ್.ಡಿ ದೇವೇಗೌಡರು, ನಟ ಉಪೇಂದ್ರ ನೂತನ ಪಕ್ಷ  ಸ್ಥಾಪನೆ ಹಾಗೂ ಐಟಿ ದಾಳಿ ವಿಚಾರ ಸಂಬಂಧ ನಾನು ಅದಕ್ಕೆ ಯಾವುದೇ ಪ್ರತಿಕ್ರಿಯೇ ನೀಡುವುದಿಲ್ಲ ಎಂದು ತಿಳಿಸಿದರು.

Key words: Amit Shah- Rahul Gandhi –come-former prime minister – hd devegowda