ಸುಷ್ಮಾ ಸ್ವಾರಾಜ್ ಎಚ್ಚರಿಕೆ ಬೆನ್ನಲ್ಲೇ ಎಚ್ಚೆತ್ತ ಅಮೇಜಾನ್: ತ್ರಿವರ್ಣ ಧ್ವಜ ಮಾದರಿಯ ನೆಲಹಾಸನ್ನು ಇ-ಕಾಮರ್ಸ್ ವೆಬ್ ಸೈಟ್ ನಿಂದ ತೆಗೆದ ಕಂಪನಿ

0
133

Sushma Swarajವಾಷಿಂಗ್ಟನ್:ಜ-12:(www.justkannada.in)ಭಾರತದ ತ್ರಿವರ್ಣ ಧ್ವಜದ ಚಿತ್ರವಿರುವ ನೆಲಹಾಸು ಮಾರಾಟ ಮಾಡುತ್ತಿರುವ ಬಗ್ಗೆ ಅಮೇಜಾನ್ ನಲ್ಲಿ ಮಾರಾಟಕ್ಕೆ ಇಟ್ಟಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಅಮೇಜಾನ್ ಗೆ ಕಠಿಣ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಮೇಜಾನ್, ತನ್ನ ಇ-ಕಾಮರ್ಸ್ ವೆಬ್ ಸೈಟ್ ನಿಂದ ತ್ರಿವರ್ಣ ಧ್ವಜ ಮಾದರಿಯಲ್ಲಿ ತಯಾರಾಗಿದ್ದ ಡೋರ್ ಮ್ಯಾಟ್ ಉತ್ಪನ್ನಗಳನ್ನು ಮಾರಾಟದ ಪಟ್ಟಿಯಿಂದ ತೆಗೆದುಹಾಕಿದೆ.

ಅಮೆಜಾನ್‌ ಕೆನಡಾಗೆ ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ ಬಳಿಕ ಅಮೆಜಾನ್‌ ಇದೀಗ ತನ್ನ ಇ-ಕಾಮರ್ಸ್‌ ವೆಬ್‌ಸೈಟಿನಿಂದ ಅದನ್ನು ತೆಗೆದು ಹಾಕಿದೆ.

ಸುಷ್ಮಾ ಸ್ವರಾಜ್‌ ಅವರು ಟ್ವಿಟರ್‌ನಲ್ಲಿ ಅಮೆಜಾನ್‌ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಮೆಜಾನ್‌ ಈ ಬಗ್ಗೆ ಕ್ಷಮೆ ಕೋರಬೇಕೆಂದೂ ಇಲ್ಲದಿದ್ದರೆ ಅಮೆಜಾನ್‌ನ ಅಧಿಕಾರಿಗಳಿಗೆ ಭಾರತೀಯ ವೀಸಾ ನೀಡಲಾಗದು ಎಂದು ಬೆದರಿಕೆ ಹಾಕಿದ್ದರು.

ಅಮೆಜಾನ್‌ನ ಸಿಯಾಟಲ್‌ನಲ್ಲಿರುವ ವಕ್ತಾರರೋರ್ವರು “ದಿ ವಾಷಿಂಗ್ಟನ್‌ ಪೋಸ್ಟ್‌’ ಅನ್ನು ಸಂಪರ್ಕಿಸಿ ವಿವಾದಾತ್ಮಕ ನೆಲಹಾಸನ್ನು ತಮ್ಮ ಇ-ಕಾಮರ್ಸ್‌ ವೆಬ್‌ಸೈಟಿನಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಅಮೆಜಾನ್‌ನ ಕೆನಡಾ ವೆಬ್‌ಸೈಟ್‌ನಲ್ಲಿ ಭಾರತದ ಧ್ವಜದ ಚಿತ್ರವಿರುವ ನೆಲಹಾಸನ್ನು ಮಾರಾಟ ಮಾಡುತ್ತಿರುವ ಬಗ್ಗೆ ಅತುಲ್‌ ಭೋಬೆ ಎಂಬುವವರು ಟ್ವೀಟ್‌ ಮಾಡಿ ಸುಷ್ಮಾ ಅವರಿಗೆ ದೂರು ನೀಡಿದ್ದರು. ಅಮೆಜಾನ್‌ಗೆ ಮರುಟ್ವೀಟ್‌ ಮಾಡಿರುವ ಸುಷ್ಮಾ, ಸರಕನ್ನು ಮಾರಾಟ ತಾಣದಿಂದ ವಾಪಸ್‌ ತೆಗೆಯುವಂತೆ ಮತ್ತು ಬೇಷರತ್‌ ಕ್ಷಮೆಯಾಚಿಸುವಂತೆ ಹೇಳಿದ್ದರು.

ಜೊತೆಗೆ ಇದನ್ನು ಪಾಲಿಸದೇ ಇದ್ದಲ್ಲಿ ಭಾರತಕ್ಕೆ ಆಗಮಿಸುವ ಅಮೆಜಾನ್‌ ವಿದೇಶಿ ಅಧಿಕಾರಿಗಳಿಗೆ ವೀಸಾ ನಿಷೇಧಿಸುವ ಬಗ್ಗೆ ಎಚ್ಚರಿಸಿದ್ದರು.

Amazon,Indian flag,doormat,Sushma Swaraj