ಬೆಂಗಳೂರು,ಏ,20,2017(www.justkannada.in): ಕನ್ನಡ ವಿರೋಧಿ ನಟ ಸತ್ಯರಾಜ್ ಹೇಳಿಕೆ ನೀಡಿರುವ ಬಗ್ಗೆ ಕ್ಷಮೆ ಕೇಳಬೇಕು. ಕ್ಷಮೆ ಕೇಳುವವರೆಗೆ ರಾಜ್ಯದಲ್ಲಿ ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್  ತಿಳಿಸಿದ್ದಾರೆ.allowing- Bahubali-2 –film- release- till- Satyaraj apologizes - Vatal Nagaraj ....

ನಟ ಸತ್ಯರಾಜ್ ಹೇಳಿಕೆ ಖಂಡಸಿ ಕನ್ನಡ ಪರಸಂಘಟನೆಗಳು ಏಪ್ರಿಲ್ 28ರಂದು ಬೆಂಗಳೂರು ಬಂದ್ ಗೆ ಕರೆ ನೀಡಿದ್ದು ಬಾಹುಬಲಿ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ  ಮಾಡಿದ ನಿರ್ದೇಶಕ ರಾಜಮೌಳಿ, ನಟ ಸತ್ಯರಾಜ್ ಹೇಳಿಕೆಗೂ ಬಾಹುಬಲಿ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.  ನಮ್ಮ ಶ್ರಮವನ್ನ ಬೆಂಬಲಿಸಿ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಾಟಾಳ್ ನಾಗರಾಜ್, ಏಪ್ರಿಲ್ 28ರಂದು ಚಿತ್ರ ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ. 28ರಂದು ಬೆಂಗಳೂರು ಬಂದ್ ನಡೆದೇ ನಡೆಯುತ್ತೆ ಎಂದು ಸತ್ಯರಾಜ್ ಕನ್ನಡ ವಿರೋಧಿ. ಕನ್ನಡಿಗರ ಕ್ಷಮೆ ಕೇಳುವವರೆಗೆ ಚಿತ್ರ ಬಿಡುಗಡೆಗೆ ಅವಕಾಶವಿಲ್ಲ. ಬಾಹುಬಲಿ-2 ಚಿತ್ರಕ್ಕೆ ಹಾಗೂ ನಿರ್ದೇಶಕ ರಾಜಮೌಳಿಗೆ ವಿರೋಧವಿಲ್ಲ.ಆದರೇ  ಸತ್ಯರಾಜ್ ಕನ್ನಡ ವಿರೋಧಿ ಮಾತುಗಳನ್ನಾಡಿದ್ದು, ಅವರು ಕ್ಷಮೆ ಕೇಳಬೇಕು. ಕ್ಷಮೆ ಕೇಳಿದ್ರೆ ಮಾತ್ರ ಚಿತ್ರ ಬಿಡುಗಡೆಗೆ ಅವಕಾಶ ನೀಡುತ್ತೇವೆ ಎಂದು ವಾಟಾಳ್ ನಾಗರಾಜ್  ಸ್ಪಷ್ಟಪಡಿಸಿದ್ದಾರೆ.

Key words: allowing- Bahubali-2 –film- release- till- Satyaraj apologizes – Vatal Nagaraj ….