ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಪ್ರಶಸ್ತಿಯ ಗರಿ

0
15897

aiish-mysoreಮೈಸೂರು:ನ-15:(www.justkannada.in)ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಎರಡು ಪ್ರಶಸ್ತಿ ಗರಿ ಲಭ್ಯವಾಗಿದೆ. ಹಿಂದಿ ಭಾಷೆಯಲ್ಲಿ ಅತ್ಯುತ್ತಮ ಮಾಹಿತಿ ಪ್ರಸಾರಮಾಡಿದ್ದಕ್ಕಾಗಿ ಕಾರ್ಯಾಲಯ ಜ್ಯೋತಿ ಸ್ಮೃತಿ ಚಿನ್ ಪುರಸ್ಕಾರ ಹಾಗೂ ಕಾರ್ಯಾಲಯ ದೀಪ ಸ್ಮೃತಿ ಚಿನ್ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ.

ಉತ್ತರಾಖಂಡದ ನೈನಿತಾಲ್ ನಲ್ಲಿ ದೆಹಲಿಯ ರಾಜ್ಯಭಾಷಾ ಸಂಸ್ಥಾನ್ ಆಯೋಜಿಸಿದ್ದ 81ನೇ ಕಾರ್ಯಾಗಾರದಲ್ಲಿ ’ಇಂದಿನ ಬದಲಾವಣೆಯ ಸನ್ನಿವೇಶಗಳು’ ಎಂಬ ವಿಷಯದ ಕುರಿತು ಸೆಮಿನಾರ್ ಪ್ರಸ್ತುತಪಡಿಸಲಾಯಿತು. ಈ ವೇಳೆ ಸಂಸ್ಥೆಯ ಸಹಾಯಕ ರಿಜಿಸ್ಟಾರ್ ಕೆ.ಪುರುಷೋತ್ತಮ, ಆರ್ ಚೇತನ್ ಇನ್ಸ್ಟಿಟ್ಯೂಟ್ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಎರಡು ಪ್ರಶಸ್ತಿಗಳು ಬಂದಿರುವ ಹಿನ್ನಲೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ.ಎಸ್.ಆರ್.ಸರಸ್ವತಿ, ಹಿಂದಿ ಅನುವಾದಕರಾದ ಡಾ.ಹೆಚ್.ಪಿ ಉಮಾ ಸರಸ್ವತಿ ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

All India Institute of Speech and Hearing Mysuru,Karyalay Jyothi Smrithi Chinh Puraskar,Karyalay Deepa Smrithi Chinh Puraskar,awards