ಬೆಂಗಳೂರು, ಮಾರ್ಚ್ 17 (www.justkannada.in): ಕಿರಿಕ್ ಪಾರ್ಟಿ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿರುವ ನಟಿ ನಟಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

‘ಕಿರಿಕ್ ಪಾರ್ಟಿ’ಯ ಅಭೂತಪೂರ್ವ ಯಶಸ್ಸಿನ ನಂತರ ರಶ್ಮಿಕಾ ಕನ್ನಡ ಚಿತ್ರರಂಗದ ಅತಿ ಹೆಚ್ಚು ಬೇಡಿಕೆಯುಳ್ಳ ನಟಿಯಾಗಿ ಹೊರಹೊಮ್ಮಿದ್ದಾರೆ. ಈಗ ಅವರ ಹೆಸರು ಇತರ ಪ್ರಾದೇಶಿಕ ಚಿತ್ರರಂಗಗಳಿಗೂ ಹಬ್ಬಿರುವುದು ವಿಶೇಷ. ನಾಗ ಶೌರ್ಯ ಜತೆಗೆ ಟಾಲಿವುಡ್ ನಲ್ಲೂ ಮೋಡಿ ಮಾಡಲು ಹೊರಟಿದ್ದಾರೆ ಈ ಕಿರಿಕ್ ಬೆಡಗಿ!

ರಶ್ಮಿಕಾ ಸದ್ಯಕ್ಕೆ ಹರ್ಷ ನಿರ್ದೇಶನದ ‘ಅಂಜನಿ ಪುತ್ರ’ ಸಿನೆಮಾದಲ್ಲಿ ಪುನೀತ್ ರಾಜಕುಮಾರ್ ಜತೆ ನಟಿಸುತ್ತಿದ್ದಾರೆ. ಅವರ ಮುಂದಿನ ಯೋಜನೆ ಸುನಿ ನಿರ್ದೇಶನದ ‘ಚಮಕ್’. ಈ ಸಿನೆಮಾದಲ್ಲಿ ಗಣೇಶ್, ರಶ್ಮಿಕಾ ಅವರೊಂದಿಗೆ ನಟಿಸಲಿದ್ದಾರೆ.