ಬೆಂಗಳೂರು, ಫೆಬ್ರವರಿ 13 (www.justkannada.in): ರಾಧಿಕಾ ಕುಮಾರಸ್ವಾಮಿ ಮತ್ತೆ ನಟನೆ ಮಾಡುವ ಮನಸ್ಸು ಬಂದಿದೆ. ಈ ಬಾರಿ ಇವರಿಗೆ ಜೊತೆಯಾಗುತ್ತಿರುವುದು ರಮೇಶ್ ಅರವಿಂದ್!

ಹೌದು. ರಾಧಿಕಾ ಕುಮಾರಸ್ವಾಮಿ ಮತ್ತೆ ಸಿನಿಮಾ ನಿರ್ಮಾಣದತ್ತ ಒಲವು ತೋರಿದ್ದಾರೆ. ತಮ್ಮ ಶಮಿಕಾ ಬ್ಯಾನರ್ ನಡಿಯಲ್ಲಿ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದು ಈ ತಿಂಗಳಾಂತ್ಯದಲ್ಲಿ ಕೆಲಸ ಆರಂಭವಾಗವ ಸಾಧ್ಯತೆ ಇದೆ.

ಭೈರದೇವಿ ಎಂದು ಚಿತ್ರದ ಹೆಸರಾಗಿದ್ದು ಇದರಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮಾಡುವುದರ ಜೊತೆಗೆ ನಟಿಸಲಿದ್ದಾರೆ ಕೂಡ.  ಶ್ರೀಜೈ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದೆ. ಅವರು ಈಗಾಗಲೇ ದುನಿಯಾ ವಿಜಯ್ ಅವರ ಆರ್ ಎಕ್ಸ್ ಸೂರಿ ಚಿತ್ರ ನಿರ್ದೇಶಿಸಿದ್ದಾರೆ.

ಲಕ್ಕಿ ಮತ್ತು ಸ್ವೀಟಿ ನನ್ನ ಜೋಡಿ ಸಿನಿಮಾ ನಿರ್ಮಿಸಿದ್ದ ರಾಧಿಕಾ ಭೈರದೇವಿಯನ್ನು ಬೇರೆ ಭಾಷೆಗಳಲ್ಲಿ ಕೂಡ ನಿರ್ಮಿಸುವ ಒಲವು ತೋರಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಭೈರದೇವಿಯನ್ನು ನಿರ್ಮಿಸುತ್ತಿದ್ದಾರೆ. ಸ್ಕಂದ ಅಶೋಕ್, ಅನು ಪ್ರಭಾಕರ್ ಚಿತ್ರದಲ್ಲಿದ್ದಾರೆ ಎಂದು ಮೂಲಗಳೂ ತಿಳಿಸಿವೆ.