ನಟ ಸುದೀಪ್ ದಾಂಪತ್ಯ ಸರಿ ದಾರಿಯತ್ತ…? ರಾಜೀ ಸಂಧಾನಕ್ಕೆ ಯತ್ನ; ಕೋರ್ಟ್’ಗೆ ಮಾಹಿತಿ ನೀಡಿದ ವಕೀಲರು

0
176

ಬೆಂಗಳೂರು, ಜ.09, 2017 (www.justkannada.in): ನಟ ಸುದೀಪ್ ದಾಂಪತ್ಯ ಸರಿದಾರಿಗೆ ಬರುತ್ತಿದೆ. ಪತ್ನಿಯೊಂದಿಗೆ ಸಹಬಾಳ್ವೆ ನಡೆಸಲು ಕಿಚ್ಚ ಸುದೀಪ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. actor-sudeep-and-wife-priya-wants-live-together-again-say-sudeep-lawyer

ಇದಕ್ಕೆ ಸಾಕ್ಷಿ ಎಂಬಂತೆ ಸುದೀಪ್ ಹಾಗೂ ಪತ್ನಿ ಪ್ರಿಯಾ ನಡುವೆ ರಾಜೀ ಸಂಧಾನ ನಡೆಸಲು ಯತ್ನಿಸಲಾಗುತ್ತಿದೆ. ಹೀಗಾಗಿ ಕೋರ್ಟ್ ಗೆ ಹಾಜರಾಗಲು ಕಾಲಾವಕಾಶ ನೀಡಬೇಕು ಎಂದು ಬೆಂಗಳೂರು ಕೌಟುಂಬಿಕ ನ್ಯಾಯಾಲಯಕ್ಕೆ ಸುದೀಪ್ ಪರ ವಕೀಲ ಭಾಸ್ಕರ್ ಬಾಬು ಮನವಿ ಮಾಡಿದ್ದಾರೆ.

ನಟ ಕಿಚ್ಚ ಸುದೀಪ್, ಪತ್ನಿ ಪ್ರಿಯಾ ಪರಸ್ಪರ ಒಪ್ಪಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಬಳಿಕ ಕೋರ್ಟ್‍ಗೆ ಒಂದು ಬಾರಿಯೂ ಹಾಜರಾಗಿರಲಿಲ್ಲ. ಈ ನಡುವೆ ಇಬ್ಬರು ಮತ್ತೆ ದಾಂಪತ್ಯ ನಡೆಸಲು ಮನಸ್ಸು ಮಾಡಿದ್ದು, ಸಂಧಾನ ನಡೆಸಲಾಗುತ್ತಿದೆ. ಹೀಗಾಗಿ  ಕೋರ್ಟ್’ಗೆ ಹಾಜರಾಗಲು ಕಾಲಾವಕಾಶ ನೀಡಿ ಎಂದು ಕೋರ್ಟ್ ಗೆ ಸುದೀಪ್ ಪರ ವಕೀಲರು ಮನವಿ ಮಾಡಿದ್ದಾರೆ. ಇದಕ್ಕೆ ಸಮ್ಮತಿ ಸೂಚಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿದ್ದಾರೆ.