ಸ್ಯಾಂಡಲ್’ವುಡ್’ನಲ್ಲಿ ‘ಮಫ್ತಿ’ ದಾಖಲೆ ಗಳಿಕೆ: ಭಾಗ-2 ಮಾಡುವ ಆಲೋಚನೆಯಲ್ಲಿ ಶ್ರೀಮುರಳಿ

0
1262
ಬೆಂಗಳೂರು, ಡಿಸೆಂಬರ್ 07 (www.justkannada.in): ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಅಭಿನಯದ ಮಫ್ತಿ ಚಿತ್ರ ನಿನ್ನೆಗೆ 15 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ.
ರಾಜ್ಯದ 250 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದ್ದು ಸ್ಯಾಂಡಲ್ ವುಡ್ ನ ಹಿಂದಿನ ಚಿತ್ರಗಳ ಗಳಿಕೆಯ ದಾಖಲೆಗಳೆಲ್ಲವನ್ನೂ ಮುರಿಯುವ ಲಕ್ಷಣ ಕಾಣುತ್ತಿದೆ. ಥಿಯೇಟರ್ ಗಳಿಗೆ ಭೇಟಿ ನೀಡಿ ಜನರ ಪ್ರತಿಕ್ರಿಯೆ ನೋಡುತ್ತಿರುವ ನಟ ಶ್ರೀಮುರಳಿ ಎಲ್ಲಾ ಕಡೆ ಹೌಸ್ ಫುಲ್ ಕಂಡು ಗೆದ್ದ ಸಂಭ್ರಮದಲ್ಲಿದ್ದಾರೆ.
2017ರ ಅಂತ್ಯ ನಟ ಶ್ರೀಮುರಳಿಗೆ ಉತ್ತಮವಾಗಿದೆ ಎನಿಸುತ್ತದೆ. ಮಫ್ತಿ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಮಫ್ತಿ-2 ಮಾಡುವ ಯೋಚನೆಯಲ್ಲಿ ಶ್ರೀಮುರಳಿ ಇದ್ದಾರೆ.
 ಚಿತ್ರವನ್ನು ಸದ್ಯದಲ್ಲಿಯೇ  ಮಾಡುವ ಆಲೋಚನೆಯಿಲ್ಲ. ತಮ್ಮ ಹಿಂದಿನ ಬದ್ಧತೆಗಳನ್ನು ಮುಗಿಸಿದ ನಂತರ ಮಫ್ತಿಯ ಮುಂದುವರಿದ ಭಾಗವನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ. ಈ ಯುಗದ ಜನರು ಇಷ್ಟಪಡುವ ಚಿತ್ರ ಮಫ್ತಿಯಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಎರಡನೇ ಭಾಗವನ್ನು ಮಾಡುವ ಯೋಜನೆಯಿದೆ ಎಂದು ಮುರಳಿ ಹೇಳಿದ್ದಾರೆ