ಮೈಸೂರು, ಮಾರ್ಚ್ 16 (www.justkannada.in): ಮೈಸೂರಿನ ಅರಮನೆ ಸುತ್ತಮುತ್ತ, ಕೋಟೆ ಮಾರಮ್ಮ ದೇವಸ್ಥಾನದ ಆವರಣದಲ್ಲಿ ನಿನ್ನೆ ಕೃಷ್ಣ-ತುಳಸಿ ಓಡಾಟ ಜೋರಾಗಿತ್ತು. ಕೃತಕ ಮಳೆಯಲ್ಲಿ ನೆನೆಯುತ್ತಾ ಓಡಾಡುತ್ತಿದ್ದ ಈ ಜೋರಿ ಸಂಚಾರ ವಿಜಯ್ ಹಾಗೂ ಮೇಘಶ್ರೀ!

ಹೌದು. ಮೈಸೂರಿನಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹಾಗೂ ನಟಿ ಮೇಘಶ್ರೀ ಅಭಿಯನದ ‘ಕೃಷ್ಣ-ತುಳಸಿ’ ಚಿತ್ರೀಕರಣ ಭರದಿಂದ ಸಾಗಿದೆ. ಅರಮನೆ ಸಮೀಪದ ಕೋಟೆ ಮಾರಮ್ಮನ ದೇವಾಲಯ ಸಮೀಪ ಚಿತ್ರದ ಚಿತ್ರೀಕರಣ ನಡೆಯಿತು. ಕೃತಕ ಮಳೆಯಲ್ಲಿ ನೆನೆಯುತ್ತಾ ವಿಜಯ್-ಮೇಘಶ್ರೀ ಜೋಡಿ ಬೇಸಿಗೆಯಲ್ಲೂ ಮೈ ತಣ್ಣಗೆ ಮಾಡಿಕೊಳ್ಳುತ್ತಿತ್ತು.

ಅಂದಹಾಗೆ ಈ ಚಿತ್ರವನ್ನು ಸುರೇಶ್ ನಿರ್ದೇಶನ ಮಾಡುತ್ತಿದ್ದು, ಕ್ಯಾಮರಾ ಮನ್ ನವೀನ್ ಕ್ಯಾಮರಾ ಕೈಚಳಕ ತೋರಿದ್ದಾರೆ. ಚಿತ್ರೀಕರಣದ ವೇಳೆ ಜಸ್ಟ್ ಕನ್ನಡ ಕ್ಯಾಮರಾ ಕಣ್ಣಿಗೆ ಸೆರೆಯಾದ ಜೋಡಿ, ಚಿತ್ರದ ಕುರಿತು ಕೆಲ ಮಾಹಿತಿಗಳನ್ನು ಹಂಚಿಕೊಂಡಿತು.