ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆಯೇ ನಟ ರಿಯಲ್ ಸ್ಟಾರ್ ಉಪೇಂದ್ರ…?

0
1898
actor- real star Upendra –enter- politics

ಬೆಂಗಳೂರು,ಆ,11,2017(www.justkannada.in): ದೇಶದ ರಾಜಕಾರಣದಲ್ಲಿ ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು  ರಾಜಕೀಯ  ಪ್ರವೇಶಿಸುತ್ತಾರೆಯೇ ಎಂಬ ಚರ್ಚೆಯಾಗುತ್ತಿರುವಾಗಲೇ ನಟ ರಿಯಲ್ ಸ್ಟಾರ್ ಉಪೇಂದ್ರ ಸಹ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.actor- real star Upendra –enter- politics

ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಆರಂಭವಾಗಿದ್ದು ಉಪೇಂದ್ರ ಅವರು ರಾಜಕೀಯ ಪ್ರವೇಶದ ಬಗ್ಗೆ ನಾಳೆ ತಿಳಿಯಲಿದೆ. ಇನ್ನು ನಾಳೆ ರಾಜ್ಯ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿವೆ. ಈ ಮೂಲಕ ಉಪೇಂದ್ರ ಅವರು ರಾಜಕೀಯಕ್ಕೆ ಎಂಟ್ರ ಕೊಟ್ಟರೇ ಬಿಜೆಪಿ ಸೇರಲಿದ್ದಾರೆಯೇ ಅಥವಾ ತಾವೇ ಸ್ವತಂತ್ರ ಪಕ್ಷ ಕಟ್ಟಲಿದ್ದಾರೆಯೇ ಎಂಬ ಪ್ರಶ್ನೆ ಮೂಡತೊಡಗಿದೆ.

ತಮ್ಮ ರಾಜಕೀಯ ಪ್ರವೇಶದ ಕುರಿತಾಗಿ ಅಭಿಮಾನಿಗಳು, ಆತ್ಮೀಯರೊಂದಿಗೆ ಉಪೇಂದ್ರ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಬೆಳವಣಿಗೆಗಳ ಕುರಿತಾಗಿ ಇತ್ತೀಚೆಗೆ ಟ್ವಿಟರ್ ನಲ್ಲಿ ಅವರು ನೀಡುತ್ತಿದ್ದ ಅಭಿಪ್ರಾಯಗಳು ಹೆಚ್ಚಿನ ಗಮನಸೆಳೆದಿದ್ದವು.

Key words: actor- real star Upendra –enter- politics