ಬೆಂಗಳೂರು,ಜೂ,19,2017(www.justkannada.in):  ನನ್ನನ್ನು ಪ್ರೀತಿಸುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ  ಪೆನಾಯಲ್ ಕುಡಿದು  ನಟ ಹುಚ್ಚ ವೆಂಕಟ್ ಆತ್ಮಹತ್ಯೆಯತ್ನಿಸಿದ್ದ ಪ್ರಕರಣ ಕುರಿತು ನಟಿ ರಚನಾ ಸ್ಪಷ್ಟನೆ ನೀಡದ್ದಾರೆ.actor-huccha-venkat-committed-suicide-case-no-marriage-actress-rachana

ನಾನು ವೆಂಕಟ್ ಅವ್ರನ್ನು ಇಷ್ಟ ಪಟ್ಟಿಲ್ಲ, ಮದುವೆನೂ ಆಗೊಲ್ಲ. ಹುಚ್ಚವೆಂಕಟ್ ಅವರು ಯಾವಾಗಲೂ ಲವ್ ಮಾಡು, ಮದುವೆಯಾಗು ಅಂತ ಹೇಳುತ್ತಿದ್ದರು. ಆ ವೇಳೆ ನಾನಯ ಮದುವೆ,ಲವ್ ಎರಡೂ ಆಗೋದಿಲ್ಲ ಅಂತ ಹೇಳಿದ್ದೆ. ಈ ವಿಚಾರದಲ್ಲಿ ನನ್ನ ಮನಸ್ಸು ಚೇಂಜ್ ಆಗೊಲ್ಲ ಎಂದು ನಟ ರಚನಾ ತಿಳಿಸಿದ್ದಾರೆ.

ಈ ಸಂಬಂಧ ಲವ್ ಪ್ರೊಪೋಸಲ್ ಮಾಡಿದ್ದಾರೆ ಮೆಸೆಜ್ ಕಳುಹಿಸಿದ್ದಾರೆಂದು ನಟ ಹುಚ್ಚವೆಂಕಟ್  ಆರೋಪಿಸಿರುವ  ಬಗ್ಗೆ ಪ್ರತಿಕ್ರಿಯಿಸಿರುವ ನಟಿ ರಚನಾ, ಅವರು ಏನೇ ಪ್ರೂಪ್ ತೋರಿಸಲಿ, ನಾನು ಯಾವುದೇ ಮೆಸೇಜ್ ಮಾಡಿಲ್ಲ. ನಾನು ಬಾಟಲ್ ತಗೊಂಡು ಕುಡಿ,ಆತ್ಮಹತ್ಯೆ ಮಾಡ್ಕೋ  ಅಂತ ಹೇಳಿಲ್ಲ. ನಾನು ಇಷ್ಟವಿಲ್ಲ ಅಂತ ಹೇಳಿದ್ರು ನನ್ನೇ ಮದುವೆಯಾಗು ಎಂದು  ದೌರ್ಜನ್ಯ ನಡೆಸ್ತಿದ್ದಾರೆ ಸ್ನೇಹಿತರಾಗಿ ಇರೋಣ ಅಂತ ಹೇಳಿದ್ರೆ ,ಪ್ರೀತಿ ಮಾಡು,ಮದುವೆಯಾಗು ಎಂದು ದೌರ್ಜನ್ಯ ನಡೆಸಿದ್ದಾರೆಇದು ಹೀಗೆ ಮುಂದುವರೆದ್ರೆ ಪೊಲೀಸ್ ಠಾಣೆಗೆ ದೂರು ನೀಡ್ತೀನಿ ನಾನು ಒಬ್ಬಂಟಿಯಾಗಿ ಓಡಾಡುತ್ತಿರುತ್ತೀನಿ,ಭಯವಿದೆ ಎಂದು ಹೇಳಿದ್ದಾರೆ.

Key words: Actor -huccha Venkat -committed suicide- case -No marriage –actress- Rachana