ನಟ ದನುಷ್ ತಮ್ಮ ಮಗ ಎಂದು ಕದಿರೇಶನ್‌ ದಂಪತಿ ಸಲ್ಲಿಸಿದ್ದ ಅರ್ಜಿ ವಜಾ: ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠದಿಂದ ರಜನಿ ಅಳಿಯನಿಗೆ ಬಿಗ್ ರಿಲೀಫ್

0
841

ಚೆನ್ನೈ:ಏ-21:(www.justkannada.in) ಖ್ಯಾತ ನಟ ಮತ್ತು ನಟ ರಜನೀಕಾಂತ್ ಅವರ ಅಳಿಯ ಧನುಷ್ ಬಿಗ್ ರಿಲೀಫ್ ಸಿಕ್ಕಿದೆ‌. ‘ಧನುಷ್ ನಮ್ಮ ಮಗ, ಆತನನ್ನು ನಮಗೊಪ್ಪಿಸಿ’ ಅಂತಾ ಮಧುರೈ ಜಿಲ್ಲೆಯ ಮೇಲೂರಿನ ಕದಿರೇಶನ್‌ ದಂಪತಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠ ವಜಾಗೊಳಿಸಿದೆ. ಇದರಿಂದ ಕಳೆದ ಕೆಲ ತಿಂಗಳುಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಧನುಷ್‌ ನಿರಾಳರಾಗಿದ್ದಾರೆ.

ನಟ ಧನುಷ್ ನಮ್ಮ ಮಗ… ಚಿಕ್ಕಂದಿನಲ್ಲಿ ನಮ್ಮ ಮನೆ ಬಿಟ್ಟು ಚೆನ್ನೈಗೆ ಓಡಿ ಹೋಗಿ ಆ್ಯಕ್ಟರ್ ಆಗಿದ್ದಾನೆ. ಆತನನ್ನು ನಮಗೊಪ್ಪಿಸಿ. ಆತನಿಗೆ ವೃದ್ಧಾಪ್ಯದಲ್ಲಿರುವ ತಮ್ಮ ಯೋಗ ಕ್ಷೇಮ ನೋಡಿಕೊಳ್ಳುವಂತೆ ಸೂಚಿಸಿ ಅಂತಾ ಕದಿರೇಶನ್‌ ದಂಪತಿ ಕೋರ್ಟ್ ಮೊರೆ ಹೋಗಿದ್ದರು. ತಮ್ಮ ಈ ವಾದಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆ ಒದಗಿಸಿದ್ದರು. ವೃದ್ಧ ದಂಪತಿಯ ಮನವಿಯ ಮೇರೆಗೆ ಧನುಷ್ ಅವರ ದೇಹದ ಮೇಲಿದ್ದ ಹುಟ್ಟು ಮಚ್ಚೆ ಮತ್ತು ಗುರುತುಗಳನ್ನು ಪರಿಶೀಲಿಸಲು ಕೋರ್ಟ್ ಆದೇಶಿಸಿತ್ತು.

ಆದರೆ ದಂಪತಿ ತಿಳಿಸಿದಂತೆ ಧನುಷ್ ದೇಹದ ಮೇಲೆ ಯಾವುದೇ ಗುರುತು ಪತ್ತೆಯಾಗಿರಲಿಲ್ಲ. ಜತೆಗೆ ದೇಹದ ಮೇಲಿದ್ದ ಗುರುತುಗಳನ್ನು ಅಳಿಸಿ ಹಾಕಿರುವ ಕುರುಹೂ ಸಹ ಪತ್ತೆಯಾಗಿರಲಿಲ್ಲ. ಈ ಸಂಬಂಧ ತಜ್ಞ ವೈದ್ಯರು ಕೋರ್ಟ್ ಗೆ ವರದಿ ಸಲ್ಲಿಸಿದ್ದರು.

ಕೊನೆಗೂ ಸುಧೀರ್ಘ ವಿಚಾರಣೆ ಬಳಿಕ ನ್ಯಾಯಾಲಯ ಇಂದು ಧನುಷ್ ಪರ ತೀರ್ಪು ನೀಡಿದೆ. ಕದಿರೇಶನ್‌ ದಂಪತಿಯ ಅರ್ಜಿಯನ್ನು ವಜಾಗೊಳಿಸಿದೆ.
Actor Dhanush,Big relief,Madras HC dismisses petition of couple