ಅಕ್ರಮ ಕಲ್ಲು ಗಣಿಗಾರಿಕೆಗೆ ಪ್ರೋತ್ಸಾಹ  ನೀಡಿದ ಆರೋಪ: ಸಿಎಂ ಸಿದ್ದರಾಮಯ್ಯ ವಿರುದ್ದ ಖಾಸಗಿ ದೂರು ದಾಖಲು…

0
211
accused -accused -illegal stone mining- Private complaint- against -CM Siddaramaiah

ಮಂಡ್ಯ,ಜನವರಿ,11,2018(www.justkannada.in):  ಸಿಎಂ ಸಿದ್ದರಾಮಯ್ಯ ಇದೀಗ ಅಕ್ರಮ ಗಣಿ ಉರುಳಿಗೆ ಸಿಲುಕಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆಗೆ ಪ್ರೋತ್ಸಾಹ  ನೀಡಿದ ಆರೋಪದ ಮೇಲೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮಂಡ್ಯ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. accused -accused -illegal stone mining- Private complaint- against -CM Siddaramaiah

ಆರ್.ಟಿ.ಐ ಕಾರ್ಯಕರ್ತ ಕೆ.ಆರ್.ರವೀಂದ್ರರವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ  ಖಾಸಗಿ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಗಭೂಷಣ್, ಸಂಸದ ಸಿ ಎಸ್ ಪುಟ್ಟರಾಜು, ಪುಟ್ಟರಾಜು ಪತ್ನಿ ನಾಗಮ್ಮ, ಅಣ್ಣನ ಮಕ್ಕಳಾದ ಸಿ.ಶಿವಕುಮಾರ್, ಸಿ.ಅಶೋಕ್, ಮೈಸೂರು ಕಾರ್ಪೋಟರ್ ಬಿ.ಎಂ.ನಟರಾಜ್ ವಿರುದ್ಧ  ಐಪಿಸಿ 200 ಅಡಿ ಪ್ರಕರಣ ದಾಖಲಾಗಿದ್ದು,  ನ್ಯಾಯಾಲಯ ದೂರು ಸ್ವೀಕರಿಸಿ, ನಾಳೆಗೆ ವಿಚಾರಣೆ ಮುಂದೂಡಿದೆ.

.ಬೇಬಿ ಬೆಟ್ಟ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಸಿಎಂ ಸಿದ್ದರಾಮಯ್ಯ ಪ್ರೋತ್ಸಾಹ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

Key words:  accused -accused -illegal stone mining- Private complaint- against -CM Siddaramaiah