ಮೈಸೂರು, ನವೆಂಬರ್ 14 (www.justkannada.in): ಮಂಗಳವಾರ ಬೆಳಗ್ಗೆ ಲಾರಿ ಮತ್ತು ಟೆಂಪೋ ಟ್ರಾವಲರ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೈಸೂರು ಹುಣಸೂರು ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಮಂಗಳೂರಿನ ಅಬ್ದುಲ್ ಹಮೀದ್ (47),ಮಹಮದ್ ಇಕ್ಬಾಲ್ (37) ಹಾಗೂ ಶೇಕ್ ಹಕೀಬ್(11)ಎಂದು ಮೃತರು. ಮೂವರು ಒಂದೇ ಕುಟುಂಬದವರು ಎನ್ನಲಾಗಿದೆ.

ಘಟನೆಯಲ್ಲಿ 14 ಮಂದಿಗೆ ಗಾಯಗಳಾಗಿದ್ದು, ಹುಣಸೂರು ಬಳಿ ಇರುವ ಬಸರಿಕಟ್ಟೆ ಬಳಿ ಘಟನೆ ನಡೆದಿದೆ. ಟೆಂಪೋ ಟ್ರಾವಲರ್ ನಲ್ಲಿ ಕುಟುಂಬ ಮಂಗಳೂರಿನಿಂದ ಊಟಿಗೆ ತೆರಳುತ್ತಿತ್ತು. ಲಾರಿಯನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಹುಣಸೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.