ಅಧಿಕಾರ ದುರುಪಯೋಗ, ಸರ್ಕಾರಿ ಭೂಕಬಳಿಕೆ ಆರೋಪ; ಸಚಿವ ಕೆ.ಜೆ ಜಾರ್ಜ್ ವಿರುದ್ದ ಲೋಕಾಯುಕ್ತ ಮತ್ತು ಎಸಿಬಿಯಲ್ಲಿ ದೂರು ದಾಖಲು…

0
243
Abuse – power- allegations - government -landing. Complaint Against- Minister KJ George

ಬೆಂಗಳೂರು,ಡಿ,7,2017(www.justkannada.in): ಸರ್ಕಾರಿ ಭೂಕಬಳಿಕೆ  ಮತ್ತು ಅಧಿಕಾರ ದುರುಪಯೋಗ ಆರೋಪದಲ್ಲಿ ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ ಜಾರ್ಜ್  ವಿರುದ್ದ ಎಸಿಬಿ, ಲೋಕಾಯುಕ್ತ ಮತ್ತು ಬಿಎಂಟಿಎಫ್ ನಲ್ಲಿ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ.

ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಸಚಿವ ಕೆ.ಜೆ ಜಾರ್ಜ್ ವಿರುದ್ದ ದೂರು ದಾಖಲಿಸಿದ್ದಾರೆ. ಅಲ್ಲದೆ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ  ಸಚಿವ ಜಾರ್ಜ್ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಜತೆಗೆ ಹಿಂದಿನ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಗಳು, ಹಿಂದಿನ ಆಯುಕ್ತರು, ಬಿಡಿಎ ನಗರ ಯೋಜನೆ ಅಧಿಕಾರಿಗಳು ಮತ್ತು ಬಿಬಿಎಂಪಿ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಎನ್ ಆರ್ ರಮೇಶ್  ದೂರು ದಾಖಲಿಸಿದ್ದಾರೆ.

ಸಚಿವ  ಕೆ.ಜೆ ಜಾರ್ಜ್ ರವರ ಮುಖ್ಯ ಪಾಲುದಾರಿಕೆಯ Emabassy Golf Link Tech Park ನಿರ್ಮಾಣದ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಸರ್ಕಾರಿ ಭೂ ಕಬಳಿಕೆ ಮಾಡಲಾಗಿದೆ. 4,000 ಕೋಟಿ ರೂಪಾಯಿ ಬೆಲೆಬಾಳುವ 52.03 ಎಕರೆಗಳಷ್ಟು ಸರ್ಕಾರಿ ಸ್ವತ್ತುಗಳಿಗೆ ನಕಲಿ ಮ್ಯುಟೆಷನ್ ರಿಜಿಸ್ಟರ್(Mutation Register) ಗಳನ್ನು ಸೃಷ್ಟಿಸಲಾಗಿದೆ ಎಂದು ರಮೇಶ್  ಗಂಭೀರ ಆರೋಪ ಮಾಡಿದ್ದಾರೆ.

ಕ್ರಯಕ್ಕೆ ಪಡೆದಿರುವುದು 52.03 ಎಕರೆ. ಆದರೆ, ಬೇಲಿ ಹಾಕಿರುವುದು 65 ಎಕರೆ ಪ್ರದೇಶಕ್ಕೆ. 850 ಕೋಟಿ ರೂಪಾಯಿ ಬೆಲೆಬಾಳುವ 13 ಎಕರೆಗಳಷ್ಟು ಸರ್ಕಾರಿ ಸ್ವತ್ತುಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿಯ ಚಲ್ಲಘಟ್ಟದ ಗ್ರಾಮದ 65 ಎಕರೆ ಸರ್ಕಾರಿ ಜಮೀನುಗಳಲ್ಲಿ Emabassy Golf Link Tech Park ನಿರ್ಮಾಣವಾಗಿದೆ.   Emabassy Golf Link Tech Park ನ ಒಟ್ಟು ವಿಸ್ತೀರ್ಣ 65 ಎಕರೆಗಳಷ್ಟು ಎಂದು ಖುದ್ದು ಆ ಸಂಸ್ಥೆಯೇ ತನ್ನ ಅಧಿಕೃತ  ವೆಬ್ ಸೈಟ್ ನಲ್ಲಿ ಹಾಕಿದೆ. ಈ 65 ಎಕರೆ ಜಮೀನುಗಳಿಗೆ ಸಂಬಂಧಿಸಿದ ಆರ್ ಟಸಿ ದಾಖಲೆಗಳಲ್ಲಿ ಇಂದಿಗೂ ಸಹ ಸರ್ಕಾರಿ ಸ್ವತ್ತುಗಳು ಎಂದೇ  ನಮೂದಾಗಿವೆ. ವಿವಿಧ 18 ಸರ್ವೆ ನಂಬರುಗಳಲ್ಲಿ 65 ಎಕರೆ ಸರ್ಕಾರಿ ಸ್ವತ್ತುಗಳಲ್ಲಿ K. J. ಜಾರ್ಜ್ ಮಾಲೀಕತ್ವದ Emabassy Golf Link Tech Park  ನಿರ್ಮಾಣವಾಗಿದೆ ಎಂದು ರಮೇಶ್ ದೂರಿನಲ್ಲಿ ತಿಳಿಸಿದ್ದಾರೆ.

Emabassy Golf Link Tech Park ಸಂಸ್ಥೆ ನಿರ್ಮಾಣದ ಹೆಸರಿನಲ್ಲಿ ಚಲ್ಲಘಟ್ಟ ಕಣಿವೆಯ ರಾಜಕಾಲುವೆಯ ನೂರಾರು ಕೊಟಿ ರೂಪಾಯಿ ಬೆಲೆಬಾಳುವ Buffer Zone ಪ್ರದೇಶದ ಸಂಪೂರ್ಣ ಒತ್ತುವರಿ ಮಾಡಲಾಗಿದೆ.Emabassy Golf Link Tech Park ಸಂಸ್ಥೆಗೆ ಸರ್ವೆ ನಂ. 7/4 ರ 4.01 ಎಕರೆಗಳಷ್ಟು ಸರ್ಕಾರಿ ಸ್ವತ್ತನ್ನು ಶಾಸಕ  ಎನ್.ಎ ಹ್ಯಾರೀಸ್ ಮತ್ತು ಅವರ ಕುಟುಂಬ ವರ್ಗದವರು ಮಾರಾಟ ಮಾಡಿರುವ ದಾಖಲೆಗಳ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ.

ವಾಸದ ಉದ್ದೇಶಕ್ಕೆಂದು ಭೂ ಪರಿವರ್ತನೆಯಾಗಿರುವ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ವಾಸದ ಉದ್ದೇಶಕ್ಕೆಂದು ಭೂ ಪರಿವರ್ತನೆಯಾಗಿರುವ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿರುವ ವಾಣಿಜ್ಯ ಕಟ್ಟಡಗಳಿಗೆ ಹಿಂದಿನ ಬಿಡಿಎ ಆಯುಕ್ತರು ನಿಯಮಬಾಹಿರವಾಗಿ ಸ್ವಾಧೀನಾನುಭವ ಪತ್ರಗಳನ್ನು ನೀಡಿದ್ದಾರೆ. ವಾಸದ ಉದ್ದೇಶಕ್ಕೆಂದು ಭೂ ಪರಿವರ್ತನೆಯಾಗಿರುವ ಪ್ರದೇಶದಲ್ಲಿ ವಾಣಿಜ್ಯ ಕಟ್ಟಡಗಳ ನಕ್ಷೆಗಳಿಗೆ  ಬಿಡಿಎ  ನಗರ ಯೋಜನೆ ಅಧಿಕಾರಿಗಳು ಕಾನೂನು ಬಾಹಿರ ಮಂಜೂರಾತಿ ನೀಡಿದ್ದಾರೆ.

Emabassy Golf Link Tech Park ಸಂಸ್ಥೆಯ ಒಟ್ಟು ನಿರ್ಮಿತ ಪ್ರದೇಶ 4.5 ದಶಲಕ್ಷ ಚ. ಅಡಿಗಳು. ಆದರೆ, ಆ ಸಂಸ್ಥೆಯು ಪಾಲಿಕೆಗೆ ನೀಡಿರುವ ಮಾಹಿತಿ ಕೇವಲ 4,79,723 ಚ. ಅಡಿಗಳಷ್ಟು ಎಂದು ಮಾತ್ರ. Emabassy Golf Link Tech Park ಸಂಸ್ಥೆಯು ತಾನು 4.5 ದಶಲಕ್ಷ ಚ. ಅಡಿಗಳಷ್ಟು ಒಟ್ಟು ನಿರ್ಮಿತ ಪ್ರದೇಶವಿರುವ ವ್ಯಾವಹಾರಿಕ ಕಟ್ಟಡಗಳನ್ನು ಹೊಂದಿರುವುದಾಗಿ ಸ್ವತಃ ತನ್ನ ಅಧಿಕೃತ  ವೆಬ್ ಸೈಟ್ ನಲ್ಲಿ ಘೋಷಿಸಿಕೊಂಡಿದೆ. ಈ Tech Park ಆವರಣದೊಳಗಿರುವ (ಹಿಲ್ಟನ್)‘Hilton’ ಪಂಚತಾರಾ ಹೋಟೆಲ್ ನ ವಿಸ್ತೀರ್ಣವೇ ಸುಮಾರು 03 ಲಕ್ಷ ಚ. ಅಡಿಗಳಿಗೂ ಹೆಚ್ಚು ಇದೆ.

Emabassy Golf Link Tech Park ಸಂಸ್ಥೆಯು ನಿರ್ಮಾಣಗೊಂಡಿರುವ 65 ಎಕರೆಗಳ ಜಾಗದ ಒಟ್ಟು ವಿಸ್ತೀರ್ಣ 28,31,400 ಚ. ಅಡಿಗಳು. ಒಟ್ಟು ನಿರ್ಮಿತ ಪ್ರದೇಶದ ಶೇ. 90% ರಷ್ಟನ್ನು ದುರುದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ. Emabassy Golf Link Tech Park ಸಂಸ್ಥೆಯು ಪಾಲಿಕೆಗೆ ನ್ಯಾಯಯುತವಾಗಿ ಪಾವತಿಸಬೇಕಿರುವ ವಾರ್ಷಿಕ ಆಸ್ತಿ ತೆರಿಗೆಯ ಮೊತ್ತ 10 ಕೋಟಿ ರೂಪಾಯಿಗಳಿಗೂ ಹೆಚ್ಚು.ಆದರೆ ಸುಮಾರು 09 ಕೋಟಿ ರೂಪಾಯಿಗಳಿಗೂ ಹೆಚ್ಚು ಆಸ್ತಿ ತೆರಿಗೆಯನ್ನು K. J. ಜಾರ್ಜ್ ಮಾಲೀಕತ್ವದ Emabassy Golf Link Tech Park ಸಂಸ್ಥೆಯು ವಂಚಿಸುತ್ತಿದೆ ಎಂದು ರಮೇಶ್ ಆರೋಪಿಸಿ ದೂರು ದಾಖಲಿಸಿದ್ದಾರೆ.

Key words: Abuse – power- allegations – government -landing. Complaint Against- Minister KJ George