ಆರುಷಿ, ಹೇಮರಾಜ್ ಜೋಡಿ ಕೊಲೆ ಪ್ರಕರಣ: ರಾಜೇಶ್, ನೂಪುರ್  ದಂಪತಿಯನ್ನ ಖುಲಾಸೆಗೊಳಿಸಿದ ಅಲಹಾಬಾದ್ ಹೈಕೋರ್ಟ್…

0
733
Aarushi -Hemraj -murder case- Allahabad High Court

ಅಲಹಾಬಾದ್,ಅ,12,2017(www.justkannada.in): 2008ರಲ್ಲಿ ನಡೆದಿದ್ದ  ಆರುಷಿ, ಹೇಮರಾಜ್ ಜೋಡಿ ಕೊಲೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರುಷಿ, ತಂದೆ ತಾಯಿಯನ್ನ  ಖುಲಾಸೆಗೊಳಿಸಿ ಅಲಹಬಾದ್ ಹೈಕೋರ್ಟ್‌  ಇಂದು ತೀರ್ಪು ನೀಡಿದೆ.Aarushi -Hemraj -murder case- Allahabad High Court

ಆರುಷಿಯನ್ನು ಅವರ ತಂದೆ ರಾಜೇಶ್‌, ತಾಯಿ ನೂಪುರ್ ತಲ್ವಾರ್ ಹತ್ಯೆಗೈದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಪ್ರಕರಣ ಸಂಬಂಧ ಆರುಷಿ ತಂದೆ ರಾಜೇಶ್‌, ತಾಯಿ ನೂಪುರ್ ತಲ್ವಾರ್ ಅವರನ್ನು ಅಪರಾಧಿಗಳೆಂದು 2013ರಲ್ಲಿ ಸಿಬಿಐ ನ್ಯಾಯಾಲಯ  ತೀರ್ಪು ನೀಡಿ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಅಂತೆಯೇ ರಾಜೇಶ್ – ನೂಪುರ್ ದಂಪತಿ ಘಾಜಿಯಾಬಾದ್‌ನ ದಸ್ನಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಶಿಕ್ಷೆ ಅನುಭವಿಸುತ್ತಲೇ ಸಿಬಿಐ ನ್ಯಾಯಾಲಯದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್‌ ಇಂದು ತೀರ್ಪು ನೀಡಿದೆ.

ಪ್ರಕರಣ ಹಿನ್ನೆಲೆ…

2008 ಮೇ 16ರಂದು 14 ವರ್ಷ ಆರುಷಿಯನ್ನು ಮನೆಯಲ್ಲಿಯೇ ಕತ್ತು ಕೊಯ್ದು ಹತ್ಯೆ ಮಾಡಲಾಗಿತ್ತು. ಮನೆಯ ಕೊಠಡಿಯಲ್ಲಿ ಆರುಷಿ ಶವ ಪತ್ತೆಯಾಗಿತ್ತು. ಇದಾದ 2 ದಿನಗಳ ಬಳಿಕ ಮನೆಯ ಟೆರಸ್‌‌‌ನಲ್ಲಿ ಕೆಲಸದಾತ ಹೇಮರಾಜ್ ಶವ ಪತ್ತೆಯಾಗಿತ್ತು. ಈ ಎರಡೂ ಹತ್ಯೆಯನ್ನು ಆರುಷಿ ಪೋಷಕರೇ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಸಿಬಿಐ ಈ ಪ್ರಕರಣವನ್ನು ತನಿಖೆ ನಡೆಸಿದ್ದು, ಸಿಬಿಐ ನ್ಯಾಯಾಲಯ 2013ರಲ್ಲಿ ಆರುಷಿ ತಂದೆ ರಾಜೇಶ್‌, ತಾಯಿ ನೂಪುರ್ ತಲ್ವಾರ್ ಅಪರಾಧಿಗಳೆಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

Key words: Aarushi -Hemraj -murder case- Allahabad High Court