ಮೈಸೂರು,ಮಾ.11: ಹಾಡ ಹಗಲೇ ಅಪರಿಚಿತ ದುಷ್ಕರ್ಮಿಗಳು ವ್ಯಾಪಾರಿಗೆ ಖಾರದ ಪುಡಿ ಎರಚಿ 10 ಲಕ್ಷ ರೂ.ಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಗುರುವಾರ ನಡೆದಿದೆ. ಆಯಿಲ್ ಮರ್ಚೆಂಟ್ ಮನೋಹರ್ ಎಂಬುವವರೇ ಹಣ ಕಳೆದುಕೊಂಡವರು.
ಮೈಸೂರು ಸರಸ್ವತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ನಗರದ ಬಂಡೀಪಾಳ್ಯದಲ್ಲಿ ಎಣ್ಣೆ ಅಂಗಡಿ ವ್ಯಾಪಾರ ನಡೆಸುತ್ತಿರುವ ಮನೋಹರ್ ಎಂಬುವವರೇ ಹಣ ಕಳೆದುಕೊಂಡವರು. ಇವರು ಹುಣಸೂರಿನಿಂದ 10 ಲಕ್ಷರೂ.ಗಳನ್ನು ತರುತ್ತಿದ್ದರು. ಪಡುವಾರಹಳ್ಳಿಯ ನೀಲಗಿರೀಸ್ ಬಳಿ ಬಸ್ ಇಳಿದು, ಆಟೋದಲ್ಲಿ ಮನೆಗೆ ತೆರಳುತ್ತಿದ್ದರು. ಆಗ ಸಾಹುಕಾರ್ ಚೆನ್ನಯ್ಯ ರಸ್ತೆ ಬಳಿ ಸ್ಯಾಂಟ್ರೋ ಕಾರಿನಲ್ಲಿ ಬಂದ ಅಪರಿಚಿತರು, ಕಣ್ಣಿಗೆ ಖಾರದ ಪುಡಿ ಎರಚಿ, ದುಡ್ಡಿದ್ದ ಬ್ಯಾಗನ್ನು ಕಸಿದುಕೊಂಡು ಪರಾರಿಯಾದರು.
ಈ ವೇಳೆ ಸಹಾಯಕ್ಕಾಗಿ ಕೂಗಿಕೊಂಡರು ಯಾರು ಸ್ಪಂದಿಸಲಿಲ್ಲ. ಆದರೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕ ಪ್ರಸನ್ನ ಎಂಬಾತ ಘಟನೆ ಕಂಡು, ಕಾರನ್ನು ಹಿಂಭಾಲಿಸಿದ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ.
ಈ ಸಂಬಂಧ ಸರಸ್ವತಿಪುರಂ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.
—————————-



0 Responses
Stay in touch with the conversation, subscribe to the RSS feed for comments on this post.