ನವದೆಹಲಿ, ನವೆಂಬರ್ 13 (www.justkannada.in): ಭೂಮಿಯೊಂದಿಗೆ ಹೋಲಿಕೆ ಮಾಡಲಾಗುತ್ತಿರುವ ಮಂಗಳ ಗ್ರಹ ಯಾನಕ್ಕಾಗಿ ಈಗಾಗಲೇ ಭಾರತದಿಂದ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ತಮ್ಮ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿದ್ದಾರೆ.

ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಬಗ್ಗೆ ಮಾಹಿತಿ ನೀಡಿದ್ದು, ನಾಸಾದ ಬಹು ಉದ್ದೇಶಿತ ಮಂಗಳಯಾನಕ್ಕೆ ವಿಶ್ವಾದ್ಯಂತ ಈ ವರೆಗೂ ಸುಮಾರು 24, 29,807 ಮಂದಿ ನೋಂದಣಿ ಮಾಡಿಸಿದ್ದು, ಈ ಪೈಕಿ ಭಾರತ ದೇಶವೊಂದರಲ್ಲೇ ಸುಮಾರು 1,38,899 ಭಾರತೀಯರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಈ ಬಗ್ಗೆ ಆಂಗ್ಲ ಧೈನಿಕವೊಂದು ವರದಿ ಮಾಡಿದ್ದು, ಭಾರತ ಮಾತ್ರವಲ್ಲದೇ ಅಮೆರಿಕದ 6,76,773 ಮಂದಿ ಮತ್ತು ಚೀನಾದ 2,62,752 ಮಂದಿ ನಾಸಾದ ಈ ಯಾನಕ್ಕೆ ಹೆಸರು ನೋಂದಾಯಿಸಿದ್ದು, ನಂತರದ ಹೆಚ್ಚು ಹೆಸರು ನೋಂದಾಯಿಸಿದವರಲ್ಲಿ ಭಾರತೀಯರಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಂಗಳಯಾನ ಯೋಜನೆ ಯಶಸ್ಸು ಕಂಡ ಕ್ಷಣದಿಂದ ಭಾರತೀಯರಲ್ಲಿ ಮಂಗಳ ಗ್ರಹದ ಕುರಿತ ಕೌತುಕ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ನಾಸಾದ ಈ ಯೋಜನೆಗೆ ನಾ ಮುಂದು ತಾಮುಂದು ಎಂಬಂತೆ ಹೆಸರು ನೋಂದಾಯಿಸಿದ್ದಾರೆ.