ಮೈಸೂರು,ಜೂ,19,2017(www.justkannada.in):  ಮೂರನೇ ಅಂತರಾಷ್ಟ್ರೀಯ ಯೋಗ ದಿನಾಚಾರಣೆ ಹಿನ್ನೆಲೆ, ಲಾಂಗೆಸ್ಟ್ ಯೋಗಾ ಚೈನ್ ಲಿಂಕ್  ಪ್ರದರ್ಶಿಸಿ ವಿಶ್ವದಾಖಲೆಗೆ ಮುಂದಾಗಿರುವ ಮೈಸೂರು ಜಿಲ್ಲಾಡಳಿತ  ಇಂದು ಯೋಗ ಪ್ರದರ್ಶನ ಆಯೋಜಿಸಿತ್ತು. ಈ ವೇಳೆ 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ.10 children -fallen -world record- yoga show -Mysore.

ಅರಮನೆ ಆವರಣದಲ್ಲಿ 9 ಸಾವಿರ ಮಂದಿಯಿಂದ ಯೋಗ ಪ್ರದರ್ಶನ ನಡೆಯುತ್ತಿತ್ತು. ಯೋಗಾ ಪ್ರದರ್ಶನದಲ್ಲಿ ಭಾಗಿಯಾಗಲು ಬೆಳಿಗ್ಗೆಯಿಂದಲೇ ಶಾಲಾ‌ ವಿದ್ಯಾರ್ಥಿಗಳು ಆಗಮಿಸಿದ್ದರು.ಕಾರ್ಯಕ್ರಮ‌ ತಡವಾದ ಹಿನ್ನೆಲೆಯಲ್ಲಿ ಸುಸ್ತಾದ ಇಬ್ಬರು ವಿದ್ಯಾರ್ಥಿಗಳು ಕುಸಿದುಬಿದ್ದರು. ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಮತ್ತೆ ಯೋಗ ಚೈನ್ ನಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಯೋಗ ಪ್ರದರ್ಶನದಲ್ಲಿ  6 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿದ್ದು, ಈ ಸಂದರ್ಭದಲ್ಲಿ 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಕೆಳಕ್ಕೆ ಬಿದ್ದಿದ್ದಾರೆ. ಈ ಮಕ್ಕಳಿಗೆ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

Key words: 10 children -fallen -world record- yoga show -Mysore.