ಹಿಂದುಳಿದ ವರ್ಗಗಳ ಆದಾಯ ಮಿತಿ 3.5 ಲಕ್ಷಕ್ಕೆ ಹೆಚ್ಚಳ:ಡಿ.ವಿ.

 

ಬೆಂಗಳೂರು: ಹಿಂದುಳಿದ ವರ್ಗಗಳ ಮೀಸಲಿಗೆ ನಿಗದಿಯಾಗಿರುವ ವಾರ್ಷಿಕ ಆದಾಯವನ್ನು 2 ಲಕ್ಷ
ರೂ.ನಿಂದ 3.5 ಲಕ್ಷ ರೂ.ಗೆ ಹೆಚ್ಚಿಸಲು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ನೇತೃತ್ವದಲ್ಲಿ ನಡೆದ
ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಹಿಂದುಳಿದ ವರ್ಗಕ್ಕೆ ಸೇರುವ 2ಎ (ಈಡಿಗ, ಕುರುಬ ಸೇರಿದಂತೆ 102 ಜಾತಿಗಳು) 2ಬಿ (ಮುಸ್ಲಿಂ) ಮತ್ತು 3ಬಿ
(ಲಿಂಗಾಯಿತ) ಜಾತಿಯ ವಾರ್ಷಿಕ ಆದಾಯ ಮಿತಿ ಹೆಚ್ಚಳದಿಂದಾಗಿ ಈ ಸಮುದಾಯಗಳು ಶಿಕ್ಷಣ ಹಾಗೂ
ಸರಕಾರಿ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಆದಾಯ
ಮಿತಿಯನ್ನು 4.5 ಲಕ್ಷ ರೂ.ಗೆ ಹೆಚ್ಚಿಸಲು ಶಿಫಾರಸು ಮಾಡಿತ್ತು.
ಸಂಪುಟದ ಇತರೆ ನಿರ್ಣಯಗಳು: ಬಳ್ಳಾರಿ ವಿಮಾನ ನಿಲ್ದಾಣ ವಿರೋಧಿ ಹೋರಾಟಗಾರರ ವಿರುದ್ಧ
ದಾಖಲಾಗಿರುವ ಕೇಸ್‌ ವಾಪಸ್‌, ಲೋಕಾಯುಕ್ತ ಕಾಯಿದೆ ಸೆಕ್ಷನ್‌ 9ಕ್ಕೆ ತಿದ್ದುಪಡಿ, ನಿವೃತ್ತ ಜಿಲ್ಲಾ
ನ್ಯಾಯಾಧೀಶ ಬಿ.ಯೋಗಿನಾಥ್‌ ಅವರನ್ನು ಲೋಕಾಯುಕ್ತ ರಿಜಿಸ್ಟ್ರಾರ್‌ ಆಗಿ ನೇಮಕ, ಕರ್ನಾಟಕ ವಿವಿ,
ಮುಕ್ತವಿವಿ ಕಾಯಿದೆಗೆ ತಿದ್ದುಪಡಿ.


 

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment