ಹಳ್ಳಿ ಗೌಡನ ಸ್ಟೈಲಿಷ್ ಮಗ, ದೇವ್ ಆದ ದಿಗಂತ್

 

 

ಸಾಮಾನ್ಯವಾಗಿ ಎಲ್ಲ ಚಿತ್ರತಂಡಗಳು, ಹೀರೋ ಹೀರೋಯಿನ್ ಕೆವಿಸ್ಟ್ರಿ, ಚೆನ್ನಾಗಿ ವರ್ಕಔಟ್ ಆಗಿದೆ ಎಂದು ಹೇಳುತ್ತಾರೆ, ಆದರೆ ನಿದರ್ೇಶಕ ಇಂದ್ರಜಿತ್ ಲಂಕೇಶ್ ತಮ್ಮ ಚಿತ್ರದಲ್ಲಿ ತಂದೆ-ಮಗನ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ ಎಂದಾಗ ಎಲ್ಲರಿಗೂ ಆಶ್ಚರ್ಯ. ಹೌದು ಅವರು ಹಾಗೆ ಹೇಳುವುದಕ್ಕೆ ಕಾರಣ ಇದೆ. ಅವರು ನಿರ್ದೇಶಿಸುತ್ತಿರುವ ದೇವ್ ಸನ್ ಆಫ್ ಮುದ್ದೇಗೌಡ ಚಿತ್ರದಲ್ಲಿ ಅಪ್ಪನಾಗಿ ಅನಂತ್ನಾಗ್ ಹಾಗೂ ಮಗನಾಗಿ ದಿಗಂತ್ ಪಾತ್ರ ಚೆನ್ನಾಗಿ ಮೂಡಿಬಂದಿರುವುದು.

ಆತ ಹಳ್ಳಿಯ ಗೌಡ, ಕಷ್ಟಪಟ್ಟು ಜೀವನ ರೂಪಿಸಿಕೊಂಡು ತಾನೇ ಒಂದು ಕಾರ್ಖಾನೆ ತೆರೆದು ಉದ್ಯಮಿಯಾಗುತ್ತಾನೆ. ಆದರೆ ತನಗೆ ಸಿಗದೇ ಇದ್ದದ್ದು ತನ್ನ ಮಗನಿಗಾದರೂ ದೊರಕಿಸಿಕೊಡಬೇಕು ಎಂಬ ಹಂಬಲ ಅಪ್ಪನದು. ಹಾಗಾಗಿ ಮಗನಿಗೆ ಒಳ್ಳೆಯ ಬೈಕ್ ಕೊಡಿಸುತ್ತಾನೆ, ಲೈಫ್ ಎಂಜಾಯ್ ಮಾಡಲು ಅವಕಾಶ ಮಾಡಿಕೊಡುತ್ತಾನೆ. ಇದು ಚಿತ್ರದ ಎಳೆಯಂತೆ.

ಮೊನ್ನೆ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡ ಬಗ್ಗೆ ಅರೆಮನಸ್ಸಿನಿಂದ ಮಾತನಾಡಿದ ನಿರ್ದೇಶಕ ಇಂದ್ರಜಿತ್, ಬರೀ ದಿಗಂತ್ ನನ್ನು ಹೊಗಳಿದರಷ್ಟೇ ಹೊರತು ಚಿತ್ರದ ಕತೆಯ ಬಗ್ಗೆ ಬಾಯಿ ಬಿಡಲಿಲ್ಲ.ಆದರೆ ಇದು ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಲಿದೆ, ದಿಗಂತ್ ಈ ಚಿತ್ರದ ಮೂಲಕ ಸ್ಟಾರ್ ಆಗಲಿದ್ದಾರೆ, ಅವರ ಇಮೇಜ್ ಖಂಡಿತಾ ಬದಲಾಗಲಿದೆ ಎಂದರು.

ಸಿನಿಮಾ ಚಿತ್ರೀಕರಣ ಶುರುಮಾಡಿದ್ದು ಗೊತ್ತಾಗಲಿಲ್ಲ, ಮುಗಿದಿದ್ದು ಗೊತ್ತಾಗಲಿಲ್ಲ. ಗಾಳಿ ತರಹ ಬಂದು ಹೋಯಿತು. ದೇವ್ ಸನ್ ಆಫ್ ಮುದ್ದೇಗೌಡ ನನ್ನ 9ನೇ ಚಿತ್ರ, ಬೇರೆ ಚಿತ್ರಗಳಿಗಿಂತ ಇದು ಭಿನ್ನವಾಗಿದೆ, ಚಿತ್ರ ನೋಡಿದವರಿಗೆ ನನ್ನ ಮೆಚ್ಯೂರಿಟಿ ಅರ್ಥವಾಗುತ್ತೆ, ಚಿತ್ರಕ್ಕೆ ಜೆಸ್ಸಿ ಸಂಗೀತ ಗಿಫ್ಟ್ ಕೊಟ್ಟಿ, ಸ್ಯಾಂಡಿ ಸಂತೋಷ್ ಕುಮಾರ್ ಪತಾಜೆ ಕ್ಯಾಮರಾ ಕೈಚಳಕ ತೋರಿದ್ದಾರೆ ಎಂದು ಹೇಳಿಕೊಂಡರು ಸ್ಟೈಲಿಷ್ ಇಂದ್ರಜಿತ್.

ಈ ಚಿತ್ರದ ಮೂಲಕ ನಿರ್ಮಾಪಕರಾಗಿರುವ ಶಿಲ್ಪಾ ರಮಣಿ ರಮೇಶ್, ಸ್ಯಾಂಡಲ್ವುಡ್ಗೆ ಹೊಸತನ ನೀಡುವ ಬಯಕೆ ಹೊಂದಿದ್ದಾರೆ. ಒಳ್ಳೆಯ ಚಿತ್ರ ನೀಡಿದರೆ ಜನ ಖಂಡಿತಾ ಸ್ವೀಕರಿಸುತ್ತಾರೆ ಎನ್ನುವ ಅಶಯ ಅವರದು.

ಇನ್ನು ನಟ ಅನಂತ್ ನಾಗ್ , ಮೊದಲು ಇಂದ್ರಜಿತ್ ಕತೆ ಕೇಳಿದಾಗ ಶಂಕೆ ಮೂಡಿತಂತೆ, ಆದರೆ ಅವರು ಅದನ್ನು ನೇರವಾಗಿ ಹೇಳದೆ ಎಸ್ಎಂಎಸ್ ಮೂಲಕ ಕಳಿಸಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರಂತೆ. ನಿರ್ದೇಶಕರು ಯಾವ  ಕಲಾವಿದರ ಮೇಲೂ ಒತ್ತಡ ಹಾಕಲ್ಲಿಲ್ಲ, ಮೊನ್ನೆ ಡಬ್ ಮಾಡುವಾಗ ಚಿತ್ರ ನೋಡಿದೆ, ಅಪ್ಪ ಮಗನ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ, ನೋಡೋಣ ಜನ ಹೇಗೆ ಸ್ವೀಕರಿಸುತ್ತಾರೋ ಎಂದರು.

ಮುದ್ದೇಗೌಡ ಎಂದಾಕ್ಷಣ, ಇದು ರಾಜಕೀಯ ವ್ಯಕ್ತಿಗೆ ಸಂಬಂಧಿಸಿದ್ದಲ್ಲ ಎಂದು ಅರ್ಥ ಅನರ್ಥಗಳಿಗೆ ತೆರೆ ಎಳೆದ ಅನಂತ್, ವಿವಾದಗಳಿಗೆ ಅವಕಾಶ ಇಲ್ಲ, ಇದು ಹಳ್ಳಿಯ ಗೌಡ ಹಾಗೂ ಆತನ ಮಗನ ಸುತ್ತ ನಡೆಯುವ ಕತೆ ಎಂದು ಫುಲ್ಸ್ಟಾಪ್ ಹಾಕಿದರು. ಅಂದಹಾಗೆ, ದಿಗಂತ್ಗೆ ಮುದ್ದೆ ಎಂದರೆ ಇಷ್ಟವಂತೆ. ಮನೆಯಲ್ಲಿ ಆಗಾಗ ಮಾಡಿಸಿಕೊಂಡು ತಿನ್ನುತ್ತಾರಂತೆ.  

 


 

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment