ಸೆಲೆಬ್ರಿಟಿ ಕ್ರಿಕೆಟ್ , ಕಡೆ ಪಂದ್ಯದಲ್ಲಿ ಕಿರಿಕ್ ; ರೀಮ್ಯಾಚ್ ಗೆ ಖೇಣಿ ಆಗ್ರಹ..!

 

ಬೆಂಗಳೂರು : ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಅಂತಿಮ ಪಂದ್ಯದ ಬಳಿಕ ಕಿರಿಕ್ ಕಾಣಿಸಿಕೊಂಡಿದೆ. ಸಂಘಟಕರು ಸರಿಯಾದ ರೀತಿಯಲ್ಲಿ ಪಂದ್ಯ ಆಯೋಜಿಸಿಲ್ಲ. ಆದ್ದರಿಂದ ರೀಮ್ಯಾಚ್   ನಡೆಸುವಂತೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಮಾಲೀಕ ಅಶೋಕ್ ಖೇಣಿ ಆಗ್ರಹಿಸಿದ್ದಾರೆ.

ನಿನ್ನೆ ರಾತ್ರಿ ಹೈದ್ರಬಾದ್ ನಲ್ಲಿ ನಡೆದ ಸಿಸಿಎಲ್ ಅಂತಿಮ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನ್ಹೋಸ್ ನಡುವೆ ಹಣಾಹಣಿ ನಡೆಯಿತು. ತೀವ್ರ ಕುತೂಹಲ ಮೂಡಿಸಿದದ್ದ ಈ ಪಂದ್ಯ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಕ್ಕಿಂತ ಲೂ ಕಡಿಮೆ ಇರಲಿಲ್ಲ. ಅದರಲ್ಲೂ ತಮಿಳುನಾಡು ತಂಡದ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡದ ಆಟಗಾರರು ಉತ್ತಮವಾಗಿಯೇ ಆಟ ಪ್ರದರ್ಶಿಸಿದರು. ಈ ಪೈಕಿ ದೃವ ಹಾಗೂ ಜೆ. ಕಾರ್ತಿಕ್ ಅವರ  ಉತ್ತಮ ಜೊತೆಯಾಟ ತಂಡವನ್ನು         ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿತು.

ಕಡೇ ಒವರ್ ನಲ್ಲಿ ಕರ್ನಾಟಕ ತಂಡದ ನಾಯಕ ಕಿಚ್ಚ ಸುದೀಪ್ , ತಂಡವನ್ನು ಗೆಲ್ಲಿಸಲೇ ಬೇಕು ಎಂದು ಹಠಕ್ಕೆ ಬಿದ್ದು ಬ್ಯಾಟಿಂಗ್  ಬೀಸಿದರು. ಆದರೆ ಅದೃಷ್ಠ ಕೈಕೊಟ್ಟಿತು. ನಾಯಕನ ಸಬ್ ಸ್ಟಿಟ್ಯೂಟ್   ಓಟಗಾರನ ಆತುರಕ್ಕೆ ಕಿಚ್ಚ  ರನ್ ಔಟ್ ಆಗಬೇಕಾಯಿತು. ಕಡೆಯ ಬಾಲ್ ನಲ್ಲಿ ಎರಡು ರನ್  ಗಳಿಸುವ ಗುರಿಯನ್ನು ಎದುರಿಸುವಲ್ಲಿ ಕರ್ನಾಟಕ ವಿಫಲವಾಯಿತು.

  • ಆಕ್ಷೇಪ :

 

ಪಂದ್ಯದ ಫಲಿತಾಂಶದ ವೇಳೆ ಕರ್ನಾಟಕ ಹಾಗೂ ತಮಿಳುನಾಡು ತಂಡಗಳ ಆಟಗಾರರ ನಡುವೆ ಸಣ್ಣ ಕಿರಿಕ್  ನಡೆದಿದೆ. ಇದರಿಂದ ಕಿಚ್ಚ ಸುದೀಪ್ ಆಕ್ರೋಶಗೊಂಡು ಮೈದಾನದ ಒಳಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸ್ ಅಧಿಕಾರಿಗಳು ಸುದೀಪ್ ಅವರನ್ನು ಸಮಾಧಾನಪಡಿಸಿದರು. ಬುಲ್ಡೋಜರ್ಸ್ ಮಾಲೀಕ ಅಶೋಕ್ ಖೇಣಿ ಸಹ ಪಂದ್ಯ ಸಂಘಟಕರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಪಂದ್ಯದಲ್ಲಿ ಜಂಟಲ್ ಮನ್ ಸ್ಪಿರಿಟ್ ಕಣ್ಮರೆಯಾಗಿದೆ. ಆದ್ದರಿಂದ ರೀಮ್ಯಾಚ್ ನಡೆಸಬೇಕು ಎಂದುಆಗ್ರಹಿಸಿದ್ದಾರೆ.

 


 
ಸೆಲೆಬ್ರಿಟಿ ಕ್ರಿಕೆಟ್ ,  ಕಡೆ ಪಂದ್ಯದಲ್ಲಿ ಕಿರಿಕ್ ; ರೀಮ್ಯಾಚ್ ಗೆ ಖೇಣಿ ಆಗ್ರಹ..!  

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment