Home » Featured »

ಸತ್ತ ಮೇಲೆಯೂ ದೆವ್ವವಾಗಿ ಕಾಡುವೆ ! ಕನ್ನಡ ಅಭಿವೃದ್ಧಿ ಬಗ್ಗೆ ಸರಕಾರಕ್ಕೆ ಪಾಪು ಎಚ್ಚರಿಕೆ

 

ಧಾರವಾಡ :  ನೀವೆಷ್ಟು ನಿರ್ಲಕ್ಷ್ಯಧೋರಣೆ ತಾಳುತ್ತೀರೋ ನಾನಷ್ಟು ಗಟ್ಟಿಯಾಗಿ ಹೋರಾಟ ಮಾಡುತ್ತೇನೆ. ಸತ್ತ ಮೇಲೂ ದೆವ್ವವಾಗಿ ನಿಮ್ಮನ್ನು ಕಾಡುವೆ…!

ಕನ್ನಡ ಅಭಿವೃದ್ಧಿ ಬಗ್ಗೆ ತೋರುತ್ತಿರುವ ನಿಷ್ಕಾಳಜಿ ಕುರಿತು ಕನ್ನಡದ ಕಟ್ಟಾಳು, ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸರಕಾರಕ್ಕೆ ರವಾನಿಸಿದ ಎಚ್ಚರಿಕೆ ಇದು.   ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡ ಪ್ರಾಚೀನ ಕಾವ್ಯ ರಸಗ್ರಹಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಬಗ್ಗೆ ನಾವೇ ಅಭಿಮಾನ ಹೊಂದದಿದ್ದರೆ ಬೇರಾರು ಹೊಂದುತ್ತಾರೆ ಎಂದು ಪ್ರಶ್ನಿಸಿದರು.

ಕನ್ನಡ ಸಂಪೂರ್ಣ ಅಧೋಗತಿಗೆ ಇಳಿಯುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಈಗ ನಾವೆಲ್ಲ ಗಟ್ಟಿ ನಿಧರ್ಾರ ಕೈಗೊಳ್ಳುವ ಕಾಲ ಬಂದಿದೆ. ಈ ನಿಟ್ಟಿನಲ್ಲಿ ಎಲ್ಲ ಕನ್ನಡಿಗರೂ ಒಂದಾಗಿ ಸರಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂದರು.

ಈಗಿನ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಓರಿಸ್ಸಾದ ಕೆಲಭಾಗ ಹಿಂದೆ ಕನ್ನಡ ಪ್ರದೇಶವಾಗಿದ್ದವು. 1914 ರಲ್ಲಿ ಸ್ವತಃ ಬಾಲಗಂಗಾಧರ ತಿಲಕರೇ ಮಾತನಾಡುತ್ತ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ಪ್ರದೇಶದ ಜನರ ಭಾಷೆ ಕನ್ನಡ ಎಂದು ಹೇಳಿದ್ದೇ ಕನ್ನಡದ ವಿಸ್ತಾರಕ್ಕೆ ನಿದರ್ಶನ ಎಂದರು.

————————-


 

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment