ಸತ್ತ ಮನೆಗೆ ಒಬ್ಬರು, ಮದುವೆ ಮನೆಗೆ ಇನ್ನೊಬ್ಬರು ತೆರಳಬಾರದು..?

 

ಮೈಸೂರು : ಸತ್ತವರ ಮನೆಗೆ ಸಿಎಂ ಸದಾನಂದಗೌಡ ತೆರಳಬಾರದು, ಮದುವೆ ಮನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೋಗಬಾರದು ……….. ಹೀಗೆ ಪ್ರಾಸಬದ್ದವಾಗಿ ಹೇಳಿಕೆ ನೀಡಿದವರು ಸಂಸದ ಅಡಗೂರು ಎಚ್.ವಿಶ್ವನಾಥ್.

ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಆಗ ಮಾಜಿ ಪ್ರಧಾನಿ ದೇವೇಗೌಡ ಜೆಡಿಎಸ್ ಸಮಾವೇಶದಲ್ಲಿ ಕಣ್ಣೀರು ಹಾಕಿದ ವಿಷಯ ಪ್ರಸ್ತಾಪಿಸಿದರು. ರಾಜ್ಯ ಅಭಿವೃದ್ಧಿ ಹೊಂದದೆ ರೈತ ಸಂಕಷ್ಟದಲ್ಲಿದ್ದಾನೆ. ಬಿಜೆಪಿ ಆಡಳಿತದಿಂದ ರಾಜ್ಯ ದಿವಾಳಿಯತ್ತ ಸಾಗುತ್ತಿದೆ. ರೈತರ ಕಷ್ಟ ನಾ ನೋಡಲಾರೆ ಎಂದು ಗೌಡರು ಕಣ್ಣೀರು ಸುರಿಸಿದ್ದರು. ಈ ಘಟನೆ ಉಲ್ಲೇಖಿಸಿದ ವಿಶ್ವನಾಥ್,    ದೇವೇಗೌಡರ ಕಣ್ಣೀರಿಗೆ ಯಾವುದೇ ಮಹತ್ವ ನೀಡುವ ಅಗತ್ಯವಿಲ್ಲ. ಅದು ಜನತೆಯನ್ನು ಮರಳು ಮಾಡುವ ಒಂದು ತಂತ್ರ. ಮಗ ಎಚ್.ಡಿ.ಕುಮಾರಸ್ವಾಮಿ ಅವರನ್ನು   ಮತ್ತೆ ಸಿಎಂ ಮಾಡಬೇಕು ಎಂಬ ಸಲುವಾಗಿ ಹೋರಾಟ ಆರಂಭಿಸಿದ್ದಾರೆ ಎಂದು ಆರೋಪಿಸಿದರು . 

ಇದು ನನ್ನ ಕಡೆ ಹೋರಾಟ ಎಂಥಲೂ ದೇವೇಗೌಡ ಹೇಳಿದ್ದಾರೆ. ಆದ್ರೆ ಇದು ಎಷ್ಟನೆ  ಕಡೇ  ಹೋರಾಟ ಎಂದು ವ್ಯಂಗ್ಯವಾಡಿದರು. ಕಣ್ಣೀರು ಸುರಿಸುದು ದೇವೇಗೌಡರ ಹುಟ್ಟುಗುಣ, ಹೇಗೆ ಸಿಎಂ ಸದಾನಂದಗೌಡ ನಗುನಗುತ್ತಲೇ ಇರುತ್ತಾರೋ ಹಾಗೆ.  ಆದ್ದರಿಂದಲೇ   ಸದಾನಂದಗೌಡರನ್ನು ಸಾವಿನ ಮನೆಗೂ, ಮಾಜಿ ಪ್ರಧಾನಿ ದೇವೇಗೌಡರನ್ನು ಮದುವೆ ಮನೆಗೂ ಕರೆಯಬಾರದು. ಏಕೆಂದರೆ ಎಲ್ಲೆ ಬಂದರೂ ಇವರ ಚಾಳಿ ನಿಲ್ಲದು ಎಂದು ವಿಶ್ವನಾಥ್ ಈ ಇಬ್ಬರ ಕಾಲೆಳೆದರು.              

 


 

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment