ವ್ಯಾಲೆಂಟೇನ್ ಡೇಗೊಂದು ಹೊಸ ವ್ಯಾಖ್ಯಾನ …ಪ್ರೇಮಿಗಳ ದಿನ
ಪ್ರೀತಿ ಯೂನಿವರ್ಸಲ್, ಪ್ರೀತಿ ಎಂಬುದು ಕೇವಲ ಹುಡುಗ-ಹುಡುಗಿಗೆ ಮೀಸಲಲ್ಲ, ಗೆಳೆಯರ ನಡುವಿನ ಪ್ರೀತಿ ಆಗಿರಬಹುದು, ಸಹೋದ್ಯೋಗಿಗಳ ನಡುವಿನ ಪ್ರೀತಿ ಆಗಿರಬಹುದು, ತಂದೆ ತಾಯಿ ಮಕ್ಕಳ ನಡುವಿನ ಪ್ರೀತಿಯೂ ಆಗಿರಬಹುದು ಅಥವಾ ಕೆಲಸದ ಮೇಲಿನ ಪ್ರೀತಿ ಆಗಿರಬಹುದು. ಪ್ರೀತಿ ಅನ್ನುವುದೇ ಹಾಗೆ, ಅದನ್ನು ಪ್ರೇಮಿಗಳಿಗೆ ಮಾತ್ರ ಮೀಸಲುಗೊಳಿಸುವುದು ಸರಿಯಲ್ಲ… ಹೀಗೆ ಪ್ರೀತಿಯ ಬಗ್ಗೆ ಚುಟುಕಾದ ಭಾಷಣ ಬಿಗಿದಿದ್ದು ‘ಪ್ರೇಮಿಗಳ ದಿನ’ ಚಿತ್ರದ ನಿರ್ದೇಶಕ ಸಂತೋಷ್ ಕುಮಾರ್.
ಅಂದ ಹಾಗೆ, ಹರಿಕಥೆ ಚಿತ್ರದಲ್ಲಿ ದಯಾಳ್ ಜತೆ ಸಹಾಯಕನಾಗಿ ದುಡಿದಿದ್ದ ಸಂತೋಷ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನ ಪಟ್ಟಕ್ಕೆ ಏರುತ್ತಿದ್ದಾರೆ. ಅದೂ ತಮ್ಮದೇ ಪ್ರೋಡಕ್ಷನ್ ಹೌಸ್ ಮೂಲಕ. ಅವರ ಪ್ರಕಾರ ‘ಪ್ರೇಮಿಗಳ ದಿನ’ ಕ್ಲಾಸ್ ಹಾಗೂ ಮಾಸ್ ಸೇರಿದಂತೆ ಎಲ್ಲ ವರ್ಗದವರಿಗೂ ಇಷ್ಟವಾಗುವಂತಹ ಸಿನೆಮಾ. ಕಥೆಯ ಬಗ್ಗೆ ಹೆಚ್ಚೆನೂ ಹೇಳದೆ, ಬಾಯಲ್ಲಿ ಹೇಳುವುಕ್ಕಿಂತ ಮಾಡಿ ತೋರಿಸುತ್ತೇನೆ ಎಂದು ಜಾರಿಕೊಳ್ಳಲು ಪ್ರಯತ್ನಿಸಿದರಾದರೂ, ಕೊನೆಗೆ ಒಂದು ಜೋಡಿ ಓಡಿ ಹೋಗಿ ಮದುವೆ ಆಗಲು ಮುಂದಾಗುತ್ತದೆ, ಅದೇ ವೇಳೆ 25 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿ ದೂರದೂರವಾಗಿದ್ದ ಜೋಡಿ ಇರುತ್ತದೆ. ಹಳೆ ಜೋಡಿಯ ಬ್ಯಾಕ್ ಡ್ರಾಪ್ನಲ್ಲಿ ಕಥೆ ಶುರುವಾಗುತ್ತದೆ, ಹೊಸ ಜೋಡಿಯ ಪಯಣ ಮುಂದುವರಿಯುತ್ತದೆ. ಇದು ಕಾಲೇಜು ಹುಡುಗರ ಫ್ರೆಂಡ್ಷಿಪ್, ಲವ್ ಸ್ಟೋರಿ ಹಾಗೂ ಯುಂಗ್ ಕಪಲ್ಸ್ ಕಥೆ ಎಂದು ಬಿಚ್ಚಿಟ್ಟರು ಸಂತೋಷ್.
ರಾಕೇಶ್, ತ್ರಿಲೋಕ್ ಚಿತ್ರದ ಹಿರೋಗಳು ಹಾಗೂ ಸಂಜನಾ ಮತ್ತು ರೂಪಾ ಹಿರೋಯಿನ್ಗಳು. ಭರತ್ ಸಂಗೀತ ನಿರ್ದೇಶಕ ಎಂದು ತಂಡವನ್ನು ಪರಿಚಯ ಮಾಡಿಕೊಟ್ಟ ಸಂತೋಷ್, ಚಿತ್ರದಲ್ಲಿ 63 ಸೀನ್ಗಳಿವೆ, 6 ಸಾಂಗ್ ಹಾಗೂ ಮೂರು ಫೈಟ್.. ಹೀಗೆ ಕಮರ್ಷಿಯಲ್ ಮೂವಿಗೆ ಬೇಕಾದ ಎಲ್ಲ ಅಂಶಗಳೂ ಇರುತ್ತವೆ ಎಂದರು.
ರಾಕೇಶ್ಗೆ ಚಿತ್ರದ ಪಾತ್ರ ಹಿಡಿಸಿದೆಯಂತೆ. ಇದೊಂದು ಕ್ಯೂಟ್ ಲವ್ ಸ್ಟೋರಿ. ನಾನು ಮಾಡುವಂತಹ ಚಿತ್ರ. ಸಂತೋಷ್ ಅವರಿಗೆ ಸಿನೆಮಾ ಬಗ್ಗೆ ಪ್ಯಾಷನ್ ಇದೆ. ಅವರ ಜತೆ ಕೆಲಸ ಮಾಡೋದಕ್ಕೆ ಖುಷಿಯಾಗುತ್ತೆ ಅಂತ ಹೇಳಿಕೊಂಡರು. ಇನ್ನು ನಾಯಕಿ ಸಂಜನಾ ನನ್ನದು ಸಿಂಪಲ್ ಸ್ವೀಟ್ ಗರ್ಲ್ ಪಾತ್ರ, ತುಂಬಾ ಇಂರ್ಪಾಟೆನ್ಸ್ ಇದೆ ಅಂದ್ರು. ತ್ರಿಲೋಕ್ ಹಾಗೂ ರೂಪಾ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.
ಚಿತ್ರದ ಸಂಗೀತ ನಿರ್ದೇಶಕ ಭರತ್, ಮೂಲತಃ ಗಾಯಕರಂತೆ. ಅವರು ಬಾಲಕನಾಗಿದ್ದಾಗಿನಿಂದಲೂ ಗಾಯನ ಹಾಗೂ ವಾದನದಲ್ಲಿ ಆಸಕ್ತಿ ಇತ್ತಂತೆ. ಅವರು ಸಂಗೀತ ನಿರ್ದೇಶಕರಾಗಿದ್ದು, ಅನಿರೀಕ್ಷಿತ, ಇದು ನನ್ನ ಮೊದಲ ಚಿತ್ರ. ಇದರಲ್ಲಿ 5 ಹಾಡುಗಳಿವೆ, ಈಗಾಗಲೇ 2 ಹಾಡುಗಳ ರೆರ್ಕಾಡಿಂಗ್ ಅಗಿದೆ. ಎಲ ಹಾಡುಗಳಿಗೂ ಕನ್ನಡದ ಗಾಯಕರನ್ನೇ ಬಳಸುತ್ತಿದ್ದೇವೆ ಎಂದು, ಕನ್ನಡದಲ್ಲಿ ಪ್ರತಿಭಾವಂತ ಗಾಯಕರಿಗೆನೂ ಕೊರತೆ ಇಲ್ಲ ಎಂದು ಕನ್ನಡತನ ಮೆರೆದರು.
ಚಿತ್ರದ ಪ್ರತಿಕಾಗೋಷ್ಠಿಯಲ್ಲಿ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ನಲ್ಲಿರುವ ಪಬ್ ಒಂದರಲ್ಲಿ ಇಟ್ಟುಕೊಂಡಿದ್ದ ಪ್ರಶಾಂತ್ ಅದಕ್ಕೆ ನೀಡಿದ ಕಾರಣ, ಚಿತ್ರದ ಹಾಡು ಪಬ್ನಲ್ಲಿ ಶೂಟಿಂಗ್ ನಡೆಯುತ್ತೆ, ಹಾಗಾಗಿ ಇಲ್ಲಿಂದಲೇ ಆರಂಭಿಸುತ್ತಿದ್ದೇವೆ ಎಂದು ಸಮಜಾಯಿಷಿ ಕೊಟ್ಟರು. ಸಾಂಗ್ಸ್ ಮೂಲಕ ಚಿತ್ರೀಕರಣ ಆರಂಭಿಸಲಿದ್ದೇವೆ. ಚಿತ್ರೀಕರಣ ಬೆಂಗಳೂರು ಸುತ್ತ ಮುತ್ತ, ಮಡಿಕೇರಿ, ಕೇರಳ ಹಾಗೂ ಮಂಗಳೂರಿನಲ್ಲಿ ನಡೆಯಲಿದೆ, ಚಿತ್ರದ ಬಜೆಟ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಒಟ್ಟಾರೆ ಒಳ್ಳೆಯ ಮೂವೀ ಕೊಡಬೇಕು ಎನ್ನುವುದು ನಮ್ಮ ಉದ್ದೇಶ ಎಂಬಲ್ಲಿಗೆ ಪ್ರೇಮಿಗಳ ದಿನ’ದ ಗೋಷ್ಠಿಗೆ ತೆರೆಬಿತ್ತು.
ಶ್ರೀಕಾಂತ್ ಹುಣಸೆವಾಡಿ





0 Comments
You can be the first one to leave a comment.