Home » Featured »

ವಿಶೇಷ ಮಕ್ಕಳ ಗೀಟು – ಗೀಜು…!

 

ಮೈಸೂರು : ಚಿತ್ರಕಲೆಯ ಆಕರ್ಷಣೆಯೇ ಅಂಥದ್ದು. ಅದು ಮಕ್ಕಳು ಚಿತ್ರ ಬಿಡಿಸುತ್ತಾರೆ ಅಂದ್ರೆ ಕೇಳಬೇಕೆ..? ಸಖತ್ತಾಗಿಯೇ ಇರುತ್ತದೆ. ಮೈಸೂರಿನಲ್ಲಿ ನಡೆದ  `ವಿಶೇಷ ಮಕ್ಕಳ’ ಚಿತ್ರಗಳ ಕಲಾಪ್ರದರ್ಶನದಲ್ಲಿ ನಾವ್ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಈ ಮಕ್ಕಳು ಚಿತ್ರಗಳ ಮೂಲಕ ಅದ್ಭುತ ಲೋಕವನ್ನೇ ಸೃಷ್ಠಿಸಿದ್ದರು.

ಸಾವಿರ ಅಕ್ಷರಗಳು ಕಟ್ಟಿಕೊಡುವ  ಭಾವವನ್ನು ಒಂದು ಚಿತ್ರ ಕಟ್ಟಿಕೊಡಬಲ್ಲದು. ಚಿತ್ರಗಳೇ ಹಾಗೆ , ಬಣ್ಣದೋಕುಳಿ ಮೂಲಕ ಎಲ್ಲವನ್ನು ಹೇಳುತ್ತದೆ. ಮನದ ಕಲ್ಪನೆಗೆ ಚಿತ್ತಾರ ನೀಡಲು ಒಂದು ವೇದಿಕೆ ಕಲ್ಪಿಸಿಕೊಟ್ಟದ್ದು ಮೈಸೂರಿನ ಮೈತ್ರಿ ಬುದ್ದಿಮಾಂದ್ಯ ಮಕ್ಕಳ ಶಾಲೆ. ಈ ಸಂಸ್ಥೆವತಿಯಿಂದ ಬುದ್ದಿಮಾಂದ್ಯಮಕ್ಕಳಲ್ಲಿ ಹುದುಗಿರುವ  ಕಲಾ ಕೌಶಲ್ಯವನ್ನು ಹೊರ ಹಾಕುವ ನಿಟ್ಟಿನಲ್ಲಿ ತರಬೇತಿ ಏರ್ಪಡಿಸಿ ಅವರಿಂದ ಅದ್ಭುತ ಚಿತ್ರಕೃತಿಗಳು ಮೂಡುವಂತೆ ಮಾಡಿತು.

ಮೈತ್ರಿ ಶಾಲೆಯ ವಿದ್ಯಾರ್ಥಿಗಳಾದ ಶ್ರೀನಿವಾಸ್, ಹರೀಶ್, ಗಿರೀಶ್, ವಿನಯ್, ರೋಹಿತ್, ರವಿಕುಮಾರ್ , ಮಂಜುನಾಥ್ , ಕೇಶವ್ ಮತ್ತು ಮುರಳೀಧರ್ ಈ ಚಿತ್ರಗಳ ಕಲಾವಿದರು. ಈ ವಿಶೇಷಮಕ್ಕಳು ತಾವು ಬುದ್ದಿಮಾಂದ್ಯರು ಎಂಬ ಯಾವ ಅಳುಕು ಇಲ್ಲದೆ, ಕಲಾವಿದರು ಕ್ಷಣ ಬೆರಗಾಗುವಂಥ 40 ಚಿತ್ರಗಳನ್ನು ಬಿಡಿಸಿದ್ದಾರೆ.  ಗ್ಲಾಸ್ ಪೇಂಟಿಂಗ್ , ಮಧುಬನಿ, ದೇಸಿ ಕಲೆಯಾದ ವರ್ಲಿ , ಪೆನ್ಸಿಲ್ ಡ್ರಾಯಿಂಗ್ ಹೀಗೆ ಅನೇಕ ವಿಧಧ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ಮೈತ್ರಿ ಶಾಲೆಯ ಈ ವಿಶೇಷ ಮಕ್ಕಳಿಗೆ ಎರಡು ತಿಂಗಳ ಕಾಲ ಚಿತ್ರಕಲೆಯ ಈ ತರಬೇತಿ ನೀಡಲಾಗಿದೆ.  ಮಕ್ಕಳ ಕಲಿಕಾ ಮನೋಭಾವ , ತಾಳ್ಮೆ , ಶ್ರದ್ಧೆ ನಿಜಕ್ಕೂ ಅದ್ಭುತ. ಆರಂಭದಲ್ಲಿ ನೋಟ್ ಬುಕ್ಕಿನಲ್ಲಿ ಅಭ್ಯಾಸ ಮಾಡಲು ಆರಂಭಿಸಿದ ಈ ಮಕ್ಕಳು ಬಳಿಕ ರೇಖೆ, ವೃತ್ತಗಳನ್ನು ರಚಿಸುವುದನ್ನು ಕಲಿಯುತ್ತಾ ಚಿತ್ರಕಲೆಗಳನ್ನು ಅಭ್ಯಾಸ ಮಾಡಿ ಈ ಅದ್ಭುತ ಕೃತಿಗಳನ್ನು ರಚಿಸಿದ್ದಾರೆ.


 

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment