Home » Crime »

ಲೈಂಗಿಕ ಅಪರಾಧ ಪತ್ತೆಗೆ ಬೆರಳಚ್ಚು ನೆರವು

 

ಚಂಡೀಗಢ :  ಲೈಂಗಿಕ ಅಪರಾಧ ಪ್ರಕರಣಗಳ ಪತ್ತೆಯಲ್ಲಿ  ಬೆರಳಚ್ಚು ಕೂಡ ಸಹಕಾರಿಯಾಗುತ್ತದೆ ಎಂಬುದಾಗಿ ನೂತನ ಸಂಶೋಧನಾ ವರದಿ ಹೇಳಿದೆ. 

ಪಂಜಾಬ್ ವಿಶ್ವವಿದ್ಯಾಲಯದ  ಮಾನವ ಶಾಸ್ತ್ರ ವಿಭಾಗದ ಡಾ. ಕೇವಲ್ ಕೃಷ್ಣನ್  ಮತ್ತು  ಎಂಎಸ್ಸಿ ವಿದ್ಯಾರ್ಥಿ ಚಿತ್ರಬಾಲಾ  ಈ ಸಂಶೋಧನೆ ನಡೆಸಿದ್ದಾರೆ.  ನಡೆದಿರಬಹುದಾದ ಅಪರಾಧ ಕೃತ್ಯದ ಸ್ವರೂಪ ನಿರ್ಧಾರ ಮತ್ತು ಆರೋಪಿಯ ಪತ್ತೆಯಲ್ಲಿ  ಬೆರಳಚ್ಚು ನೆರವಾಗುತ್ತದೆ ಎಂಬ ಅಂಶವನ್ನು  ಸಂಶೋಧನೆ ದಾಖಲಿಸಿದೆ. ಹೆಚ್ಚಾಗಿ ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಯಲ್ಲಿ  ಪೊಲೀಸರು ಮತ್ತು ತನಿಖಾಧಿಕಾರಿಗಳು ವಿಫಲವಾಗುತ್ತಿರುವುದರಿಂದ  ಬೆರಳಚ್ಚು  ನೆರವು ಈ ನಿಟ್ಟಿನಲ್ಲಿ  ಮಹತ್ವದ ಪಾತ್ರ ವಹಿಸಲಿದೆ. ತನಿಖಾ ಪ್ರಕ್ರಿಯೆಯನ್ನು ಚುರುಕುಗೊಳಿಸಲಿದೆ ಎಂದು ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ. 

 97 ಪುರುಷ ಮತ್ತು  97ಮಹಿಳೆಯರನ್ನು  ಸಂಶೋಧನಾ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, 194 ಮಂದಿಯ ಎಲ್ಲಾ ಹತ್ತು ಅಂದರೆ ಒಟ್ಟು 1940 ಬೆರಳಚ್ಚುಗಳನ್ನು ಅಧ್ಯಯನ ಮಾಡಲಾಗಿದೆ.

ಈ ಸಂಶೋಧನೆಯನ್ನು  ಅಮೆರಿಕನ್ ಅಕಾಡೆಮಿ ಆಫ್ ಫೊರೆನ್ಸಿಕ್ ಸೈನ್ಸಸ್  ಸ್ವೀಕರಿಸಿದ್ದು,  ಫೆ. 20ರಿಂದ 25ರವರೆಗೆ  ಅಮೆರಿಕದಲ್ಲಿ ನಡೆಯಲಿರುವ  ಅಮೆರಿಕ ಅಕಾಡೆಮಿಯ 64ನೇ ವಾಷರ್ಿಕ ಸಮಾವೇಶದಲ್ಲಿ  ಸಂಶೋಧನಾ ವರದಿ ಮಂಡಿಸಲಿದ್ದಾರೆ.


 

Tags

, , ,

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment