Home » Media Masala »
ರಂಗನಾಥ್ ಒಡೆತನದ `ಟಿವಿ’ ಚಾನಲ್ ಹೆಸ್ರು `ಪಬ್ಲಿಕ್ ‘ ಆಗಿದೆ..!
ಅಂಥೂ ಇಂಥೂ ಹೊಸ ಕನ್ನಡ ಚಾನೆಲ್ ಉದ್ಘಾಟನೆಗೆ ದಿನಾಂಕ ಪಕ್ಕಾ ಆಗಿದೆ. ಇದೇ ಜನವರಿ 26 ರಂದು ಭಾರತ ಗಣರಾಜ್ಯೋತ್ಸವ . ಅದೇ ದಿನ ಕನ್ನಡ ಟಿವಿ ಚಾನಲ್ಲುಗಳ ಸಾಲಿಗೆ ಹೊಸ ವಾಹಿನಿಯಾಗಿ ”ಪಬ್ಲಿಕ್ ಟಿವಿ” ಸೇರ್ಪಡೆಗೊಳ್ಳುತ್ತಿದೆ. ಪತ್ರಕರ್ತ ಎಚ್. ಆರ್. ರಂಗನಾಥ್. ಕನ್ನಡ ಪ್ರಭದ ಮೂಲಕ ಪತ್ರಿಕೋದ್ಯಮದಲ್ಲಿ ಗುರುತಿಸುವಂತಾದ ಪತ್ರಕರ್ತ ಎಚ್ . ಆರ್. ರಂಗನಾಥ್ ಇನ್ನು ಮುಂದೆ ಪತ್ರಿಕೋದ್ಯಮಿ.
ಸುವರ್ಣ ವಾಹಿನಿಯಿಂದ ಹೊರ ಬಿದ್ದ ಬಳಿಕ ರಂಗನಾಥ್ ಹೊಸವಾಹಿನಿ ಪ್ರಾರಂಭಿಸುವ ಬಗ್ಗೆ ಗುಸುಗುಸು ಕೇಳಿ ಬಂದಿತ್ತು. ಕೆಲ ತಿಂಗಳುಗಳ ಬಳಿಕ ಅದು ವದಂತಿಯಾಗಿ, ಈಗ ಅಧಿಕೃತವಾಗಿದೆ.
ಈ 24/7 ಸುದ್ದಿ ವಾಹಿನಿಯ ಮುಖ್ಯಸ್ಥರು. Writemen Media Pvt Ltd ಸಂಸ್ಥೆ `ಪಬ್ಲಿಕ್ ಟಿವಿ’ ಯನ್ನು ಸಾದರಪಡಿಸುತ್ತಿದೆ. ಕಂಪನಿಯ ಸಿಇಒ ಅರುಣ್ ಕುಮಾರ್. ಎಸ್. ದಿವಾಕರ್ ಅವರು ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರು.
” ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ” ಎಂಬುದು ಈ ವಾಹಿನಿಯ ಟ್ಯಾಗ್ ಲೈನ್. ಅಂದ್ರೆ ಜನತೆಯಿಂದ ಜನತೆಗಾಗಿ ಜನತೆಗೋಸ್ಕರ ಎಂಬುದು ರಂಗನಾಥ್ ಉವಾಚ.
- ಮನಿ ಮ್ಯಾನೇಜ್ ಮೆಂಟ್ ಮೂಲಕ ಹೂಡಿಕೆ :
ಸಾಮಾನ್ಯವಾಗಿ ಒಂದು ಸುದ್ದಿ ವಾಹಿನಿ ಪ್ರಾರಂಭಿಸಬೇಕಾದರೆ 40-45 ಕೋಟಿ ರೂ ಅಗತ್ಯ ಎಂಬ ನಂಬಿಕೆ ಇದೆ. ಇನ್ನು ಕೆಲವರು 100-150 ಕೋಟಿ ರೂ ಬಂಡವಾಳ ಅಗತ್ಯ ಎನ್ನುತ್ತಾ ಉದ್ಯಮವನ್ನು ಉತ್ಪ್ರೇಕ್ಷೆ ಮಾಡುತ್ತಾರೆ. ಆದರೆ ಪಬ್ಲಿಕ್ ಟಿವಿಮಾತ್ರ `ಲೋ ಬಜೆಟ್ ‘ ಚಾನೆಲ್ ಅಂಥೆ. ಅರ್ಥಾತ್ 25- 30 ಕೋಟಿ ಬಂಡವಾಳ ಹೂಡಿಕೆ ಮೂಲಕ ಪ್ರಾರಂಭಿಸಲಾಗಿದೆ.
- ಪಬ್ಲಿಕ್ ಟಿವಿ ಬಂಡವಾಳಗಾರರು ಯಾರು ಎಂಬುದನ್ನು ಈ ತನಕ ಎಲ್ಲಿಯೂ ಬಹಿರಂಗ ಪಡಿಸದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಕೆಲ ಸಿನಿಮಾ ಮಂದಿಯವರು ಈ ವಾಹಿನಿಯ ಚಾಲನೆಗೆ ಆರ್ಥಿಕ ಶಕ್ತಿ ಒದಗಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಯಾವುದು ಅಧಿಕೃತವಲ್ಲ.
- ಹಾಲಿ ಕನ್ನಡದ ಚಾನೆಲ್ಲ್ ಗಳು ಯಾರ ಒಡೆತನದಲ್ಲಿವೆ ಎಂಬುದು ಜಗ್ಗಜಾಹಿರುಗೊಂಡಿದೆ. ಉದ್ಯಮಿಗಳ ಹಿಡಿತಕ್ಕಿಂತ ರಾಜಕಾರಣಿಗಳ ಹಿಡಿತವೇ ತುಸು ಹೆಚ್ಚಾಗಿದೆ.
ಉದಯ ಟಿವಿ ಮಾಲೀಕ ದಯಾನಿಧಿ ಮಾರನ್ , ಪಕ್ಷ : ಡಿಎಂಕೆ , ಈ ಟಿವಿ ಮೂಲ ಮಾಲೀಕರು ರಾಮೋಜಿರಾವ್ – ಭಾವಿ ಮಾಲೀಕರು ಅಂಬಾನೀಸ್, ಇದೇ ರೀತಿ ಜನಶ್ರೀ ಟಿವಿ ಮಾಲೀಕ ಮಾಜಿ ಸಚಿವ ಜನಾರ್ದನ ರೆಡ್ಡಿ , ಪಕ್ಷ ಬಿಜೆಪಿ . ಕಸ್ತೂರಿ ಟಿವಿ ಒಡತಿ ಶ್ರೀಮತಿ ಅನಿತಾ ಎಚ್ ಡಿ ಕುಮಾರಸ್ವಾಮಿ, ಪಕ್ಷ ಜೆಡಿಎಸ್ . ಸಮಯ ಟಿವಿ ಮಾಲೀಕರು ಸಚಿವ ಮುರುಗೇಶ್ ನಿರಾಣಿ, ಪಕ್ಷ ಬಿಜೆಪಿ . ಟಿವಿ9 ಮಾಲೀಕ ಉದ್ಯಮಿ ಶ್ರೀನಿರಾಜು, ಕಡೆಯದಾಗಿ ಸುವರ್ಣ ಟಿವಿ ಮಾಲೀಕರು , ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ .




1 Comment
best of luck