Home » Featured »

ಯಡ್ಡಿ ಕೊರಳಿಗೆ ಮತ್ತೊಂದು ಪ್ರಕರಣ ; ಗಣಿ ಗುತ್ತಿಗೆಗೆ ಹಣ ಸ್ವೀಕರಿಸಿದ ದಾಖಲೆ ಬಿಡುಗಡೆ

 

ಬೆಂಗಳೂರು ;  ಹಲವಾರು ಹಗರಣಗಳ ಸುಳಿಯಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೊರಳಿಗೆ ಮತ್ತೊಂದು ಪ್ರಕರಣ ಸಿಲುಕಿಕೊಂಡಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ಸಮಾಜ ಪರಿವರ್ತನಾ ಸಮುದಾಯ,  ಯಡಿಯೂರಪ್ಪ ವಿರುದ್ಧ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದೆ. ಗಣಿಗುತ್ತಿಗೆ ಪರವಾನಗಿ ನೀಡಲು ದೊಡ್ಡ ದೊಡ್ಡ ಕಂಪನಿಗಳಿಂದ ಹಣ ಸ್ವೀಕರಿಸಿರುವ ಕುರಿತು ಎಸ್ಪಿಎಸ್ನ ಎಸ್.ಆರ್.ಹಿರೇಮಠ್ ಹೊಸ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಜೆಎಸ್ಡಬ್ಲ್ಯೂ ಹಾಗೂ ಯಡಿಯೂರಪ್ಪ ಕುಟುಂಬ ಮಾಡಿರುವ ಹಗರಣ ಸುಪ್ರೀಂ ಕೋರ್ಟ್  ಮುಂದಿದೆ. ಅದನ್ನು ಸಿಬಿಐ ತನಿಖೆಗೆ ಒಪ್ಪಿಸುವ ಕುರಿತು ಸುಪ್ರೀಂ ಕೋರ್ಟ್ ನ ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ)ಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಫೆ.18ರಂದು ನಡೆದ ವಿಚಾರಣೆ ಸಂದರ್ಭದಲ್ಲಿ  ನೀಡಲಾದ ನಿರ್ದೇಶನದಂತೆ ಯಡಿಯೂರಪ್ಪ ವಿರುದ್ಧ ದಾಖಲೆ ಸಮೇತ 113 ಪುಟಗಳ ಮಹತ್ವದ ದಾಖಲೆಯನ್ನು ಸಿಇಸಿಗೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು.

ತಮ್ಮ ಅಧಿಕಾರವಧಿಯಲ್ಲಿ ಗಣಿ ಗುತ್ತಿಗೆ ಮಂಜೂರು ಮಾಡಲು ಜಿಂದಾಲ್ ಸ್ಟೀಲ್ಸ್ ವರ್ಕ್ಸ್ (ಜೆಎಸ್ ಡಬ್ಲ್ಯೂ) ಹಾಗೂ  ಅದಕ್ಕೆ ಸಂಬಂಧಿಸಿದ ಇತರೆ ಕಂಪನಿಗಳಿಂದ ಯಡಿಯೂರಪ್ಪ ಕುಟುಂಬಕ್ಕೆ 40 ಕೋಟಿ ರೂ. ಕಿಕ್ಬ್ಯಾಕ್ ನೀಡಲಾಗಿದೆ ಎಂದು ಹೀರೆಮಠ ಆರೋಪಿಸಿದರು.

ಲೋಕಾಯುಕ್ತ ಅಂತಿಮ ವರದಿಯಲ್ಲಿ ಕೇವಲ 30 ಕೋಟಿ ರೂ. ಪಡೆದಿರುವ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದ್ದು, ನಂತರದಲ್ಲಿ ಲಭ್ಯವಾಗಿರುವ ದಾಖಲೆ ಪ್ರಕಾರ ಜೆಎಸ್ಡಬ್ಲ್ಯೂಗೆ ಸಂಬಂಧಿಸಿದ ಇಂಡಸ್ಟ್ರಿಯಲ್ ಟೆಕ್ನೊ ಮ್ಯಾನ್ಪವರ್ ಸಪ್ಲೈ ಆ್ಯಂಡ್ ಸರ್ವಿ ಸ್ ಪ್ರೈ. ಲಿ.ನಿಂದ 3.40 ಕೋಟಿ ರೂ., ಜೈ ಭಾರತ್ ಟೆಕ್ನಿಕಲ್  ಸರ್ವಿಸ್ ಲಿ.ನಿಂದ 3.40 ಕೋಟಿ ರೂ. ಮತ್ತು ರಿಯಲ್ ಟೆಕ್ನಿಕಲ್ ಸಲ್ಯೂಶನ್ಸ್ ಪ್ರೈ.ಲಿ.ನಿಂದ 3.20 ಕೋಟಿ ರೂ. ಸೇರಿದಂತೆ ಒಟ್ಟು 40 ಕೋಟಿ ರೂ. ಪಡೆದಿರುವ ಕುರಿತು ಅವರು ವಿವರಿಸಿದರು.

 


 
 
 

0 Comments

You can be the first one to leave a comment.

 
 

Leave a Comment