Home » FrontPage »

ಮೊದಲ ಟ್ವೆಂಟಿ-20 – ಕ್ಷಣಗಣನೆ; ಗೆಲುವಿಗಾಗಿ ಕಾಯುತ್ತಿದೆ ಅಭಿಮಾನಿ ಗಣ

 

 

ಸಿಡ್ನಿ : ಆಸೀಸ್ ಪ್ರವಾಸದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳನ್ನು ಸೋತು ಎಲ್ಲಾ ದಿಕ್ಕಿನಿಂದಲೂ ಟೀಕೆಗೆ ಗುರಿಯಾಗಿರುವ ಭಾರತೀಯ ತಂಡವು ಎರಡು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿಯೊಂದಿಗೆ ಇಂದು ಸಿಡ್ನಿಯ ಎಎನ್‌ಜೆಡ್ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ.

ಭಾರತೀಯ ಟ್ವೆಂಟಿ-20 ತಂಡವು ಯುವ ಹಾಗೂ ಅನುಭವಿ ಆಟಗಾರರಿಂದ ತುಂಬಿಕೊಂಡಿದೆ. ತಂಡವು ಸುರೇಶ್ ರೈನಾ, ಮನೋಜ್ ತಿವಾರಿ, ಪ್ರವೀಣ್ ಕುಮಾರ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ರವೀಂದ್ರ ಜಡೇಜಾ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರಾಹುಲ್ ಶರ್ಮಾ ಅವರಂತಹ ಯುವ ಆಟಗಾರರನ್ನು ಹೊಂದಿದೆ ಅಲ್ಲದೆ ಹಿರಿಯ ಆಟಗಾರರಾದ ನಾಯಕ ಧೋನಿ ಸಹಿತ ಆರಂಭಿಕರಾದ ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಫಾರ್ಮ್ ಕಂಡುಕೊಳ್ಳುವ ಅಗತ್ಯವಿದೆ. ಮುಂಬರುವ ತ್ರಿಕೋನ ಏಕದಿನ ಸರಣಿಗೆ ಮುನ್ನ ಫಾರ್ಮ್ ಕಂಡುಕೊಳ್ಳಲು ಈ ಎರಡು ಟ್ವೆಂಟಿ-20 ಪಂದ್ಯಗಳು ಇವರಿಗೆ ಉತ್ತಮ ಅವಕಾಶ ಎನಿಸಿದೆ.

ಬೌಲಿಂಗ್ ವಿಭಾಗದ ನೇತೃತ್ವವನ್ನು ಅನುಭವಿ ಜಹೀರ್ ಖಾನ್ ವಹಿಸಿಕೊಳ್ಳಲಿದ್ದಾರೆ. ಇವರಿಗೆ ಸಾಥ್ ನೀಡಲು ಇರ್ಫಾನ್ ಪಠಾಣ್, ಪ್ರವೀಣ್ ಕುಮಾರ್, ಉಮೇಶ್ ಯಾದವ್ ಇದ್ದಾರೆ. ಏಕೈಕ ಸ್ಪಿನ್ನರ್ ರೂಪದಲ್ಲಿ ಆರ್. ಅಶ್ವಿನ್ ಅಂತಿಮ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಜಾರ್ಜ್ ಬೈಲಿ ಮುನ್ನಡೆಸುತ್ತಿದ್ದಾರೆ. ಈ ಮೂಲಕ ಪದಾರ್ಪಣೆ ಪಂದ್ಯದಲ್ಲಿಯೇ ತಂಡದ ನಾಯಕನಾಗುವ ಗೌರವ ಅವರಿಗೆ ಲಭಿಸಿದೆ. ಆತಿಥೇಯ ತಂಡದಲ್ಲಿ ಯುವ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ತಂಡ ಇಂತಿದೆ:

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ರಾಹುಲ್ ಶರ್ಮ, ಜಹೀರ್ ಖಾನ್, ಆರ್. ಅಶ್ವಿನ್, ಉಮೇಶ್ ಯಾದವ್, ಪ್ರವೀಣ್ ಕುಮಾರ್, ವಿನಯ್ ಕುಮಾರ್, ಇರ್ಫಾನ್ ಪಠಾಣ್, ರವೀಂದ್ರ ಜಡೇಜ, ಮನೋಜ್ ತಿವಾರಿ.

ಆಸ್ಟ್ರೇಲಿಯಾ: ಜಾರ್ಜ್ ಬೈಲಿ (ನಾಯಕ), ಡೇವಿಡ್ ವಾರ್ನರ್, ಟ್ರ್ಯಾವಿಸ್ ಬಿರ್ಟ್, ಡೇನಿಯಲ್ ಕ್ರಿಸ್ಟಿಯನ್, ಕ್ಸೇವಿಯರ್ ಡೊಹೆರ್ಟಿ, ಜೇಮ್ಸ ಫಾಲ್ಕನೆರ್, ಆ್ಯರನ್ ಫಿಂಚ್, ಡೇವಿಡ್ ಹಸ್ಸಿ, ಬ್ರೆಟ್ ಲೀ, ಕ್ಲಿಂಟ್ ಮೆಕೇ, ಮಿಷೆಲ್ ಮಾರ್ಷ್, ಶಾನ್ ಮಾರ್ಷ್, ಮ್ಯಾಥ್ಯೂ ವೇಡ್, ಬ್ರಾಡ್ ಹಾಗ್


 

Related Posts

  • No Related Posts

About the author

 
 

1 Comment

  1. k.b.rameshanayaka says:

    abimanigalige nirase,
    doni vipala.
    laksatantara janara time,money waste

 
 

Leave a Comment