Home » Featured »

ಮುತ್ತುಗೆ ತೊಟ್ಟಿಲ ಭಾಗ್ಯ; ಆಕಳು ಕರುವಿಗೆ ನಾಮಕರಣ ಸಂಭ್ರಮ

 

ಕಾರವಾರ :  ಈ ಜಗತ್ತಿನಲ್ಲಿ ಪರಿಸ್ಥಿತಿಗಳು ಹೇಗೆ ಬರುತ್ತವೆಂದು ಹೇಳಲಸಾಧ್ಯ. ಮನುಷ್ಯನಾಗಿ ಹುಟ್ಟಿ ಪ್ರಾಣಿಯಂತೆ ಬದುಕುವ ಪಾಡು ಕೆಲವರಿಗೆ ಬಂದರೆ ಪ್ರಾಣಿಯೊಂದಕ್ಕೆ ಮನುಷ್ಯರಂತೆ ಸುಖ-ಸಂತೋಷ ಅನುಭವಿಸುವ ಭಾಗ್ಯ ಬರುವುದುಂಟು. ಕೈಗಾ ಕುಚೇಗಾರ ಬಳಿಯ ಕೆಳಗಿನ ಕೊಡಾರದ ರತ್ನಾಕರ ನಾಯ್ಕ ಎಂಬುವವರ ಮನೆಯ ನವಜಾತ ಆಕಳ ಕರು `ಮುತ್ತು’ಗೆ ತೊಟ್ಟಿಲ ಭಾಗ್ಯ ಸಿಕ್ಕಿರುವುದೇ ಇದಕ್ಕೆ ಸಾಕ್ಷಿಯಾಗಿದೆ !

ಬಲೂನು, ಪರಪರೆಯಿಂದ ಶೃಂಗರಿಸಲ್ಪಟ್ಟ ತೊಟ್ಟಿಲು, ದೀಪ, ರಂಗೋಲಿ, ಮನೆ ಜನರ ಸಡಗರ, ಸಂಭ್ರಮ… ಎಲ್ಲವನ್ನೂ ನೋಡಿದಲ್ಲಿ ಈ `ಕೂಸು’ ಯಾರದು? ಎಂದು ಪ್ರಶ್ನಿಸುವಂತಿತ್ತು. ಆದರೆ ತೊಟ್ಟಿಲಲ್ಲಿ ಬಣ್ಣಬಣ್ಣದ ವಸ್ತ್ರದಲ್ಲಿ ಸುತ್ತಿಕೊಂಡಿದ್ದ ಜೀವ ಮನುಷ್ಯನಾಗಿ ಹುಟ್ಟುವುದು ಎಲ್ಲೋ ತಪ್ಪಿ ಈ ಮನೆಯಲ್ಲಿ ಕರುವಾಗಿ ಜನ್ಮ ತಳೆದಿದೆ ಎನಿಸುವಂತಿತ್ತು.

ನಾಯ್ಕ ಅವರು 2009ರಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿಯಿಂದ ಲಕ್ಷ್ಮಿ ಎಂಬ ಹೆಸರಿನ ಆಕಳು ಖರೀದಿಸಿ ತಂದಿದ್ದರು. ಆಗ ಎರಡನೇ ಕರುವಿನೊಂದಿಗೆ ಬಂದಿದ್ದ ಲಕ್ಷ್ಮಿ ನಂತರ ನಾಲ್ಕೈದು ವರ್ಷ ಮತ್ತೆ ಗರ್ಭವತಿಯಾಗಲೇ ಇಲ್ಲ. ಇದು ಜಾನುವಾರುಗಳ ಬಗ್ಗೆ ವಿಶೇಷ ಪ್ರೇಮ, ಪ್ರೀತಿ ಹೊಂದಿದ ನಾಯ್ಕ ಅವರ ಕುಟುಂಬದವರಿಗೆ ಸಹಜವಾಗಿ ಬೇಸರ ಮೂಡಿಸಿತ್ತು.


 

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment