Home » Media Masala »
ಮಾಧ್ಯಮ ಅಕಾಡೆಮಿಯಿಂದ ಪೋನಪ್ಪಗೆ ಗೇಟ್ ಪಾಸ್ ಗುರು..!
ಬೆಂಗಳೂರು : ಮಾಧ್ಯಮ ಅಕಾಡೆಮಿಯಿಂದ ಪೊನ್ನಪ್ಪ ಹಾಗೂ ಇತರ ಪದಾಧಿಕಾರಿಗಳಿಗೆ ಸರಕಾರ ಒಂದೇ ವಾರದಲ್ಲಿ ಗೇಟ್ ಪಾಸ್ ನೀಡಿರುವುದು ಆಶಾದಾಯಕ ಬೆಳವಣಿಗೆ ಎಂದೇ ಹೇಳಬೇಕು. ಈ ನಡುವೆ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆಗೆ ಯಾವ ಮಾನದಂಡ ಇಟ್ಟುಕೊಂಡು ಆಯ್ಕೆ ಮಾಡಿದ್ದಾರೋ ಆ ಜಗದೀಶನೇ ಬಲ್ಲ…!. ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಹುದ್ದೆಯನ್ನೇ ದುರುಪಯೋಗ ಮಾಡಿಕೊಂಡು ಅವರು ಅಕಾಡೆಮಿ ಅಧ್ಯಕ್ಷ ಹುದ್ದೆಗೆ ಮತ್ತೆ ಪ್ರಜಾವಾಣಿಯ ಮನುಷ್ಯರನ್ನೇ ಕೂರಿಸಿದ್ದಾರೆ. ಅಕಾಡೆಮಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕದಲ್ಲಿ ‘ಜಗದೀಶ್’ರ ಮಹಾತ್ಮೆ ಅರಿತ ಸರಕಾರ ಕಡೆಗೂ ತನ್ನ ತಪ್ಪಿನ ಅರಿವಾಗಿ ನಿರ್ಧಾರದಿಂದ ಹಿಂದೆ ಸರಿಯುವ ಮಹತ್ವದ ನಿರ್ಣಯ ಮಾಡಿದೆ.
ಹೀಗಾಗಿ ಪೊನ್ನಪ್ಪ ಎಷ್ಟು ಧಾವಂತದಲ್ಲಿ ಅಧಿಕಾರ ಸ್ವೀಕರಿಸಿದರೋ ಅದೇ ಸ್ಪೀಡಿನಲ್ಲಿ ರಿವರ್ಸ್ ಗೆರ್ನಲ್ಲಿ ಪ್ರೆಸ್ ಕ್ಲಬ್ ಹೋಗಿ, ಎಂಜಿ ರೋಡ್ ಕಡೆ ಹೋಗಿದ್ದಾರೆ. ಪೊನ್ನಪ್ಪ ಅಧಕ್ಷಗಿರಿ ಹೋಗಲು ಮುಖ್ಯವಾಗಿ ಎರಡು ಕಾರಣವೆಂದು ಮೂಲಗಳು ತಿಳಿಸಿವೆ.
ಕಾರಣ ಒಂದು , ಪೊನ್ನಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷರು ಆಗಿರುವುದು ಮುಖ್ಯಮಂತ್ರಿಯ ಗಮನಕ್ಕೆ ಬಂದಿದೆ. ಒಬ್ಬರಿಗೆ ಎರಡು ಹುದ್ದೆ ಬೇಡ ಎಂದು ನಿರ್ಧರಿಸಿದರಂತೆ .ಎರಡನೆ ಕಾರಣ ಅಂದ್ರೆ ಈ ಪೊನ್ನಪ್ಪ ಅವರನ್ನು ಕುರ್ಚಿಲಿ ಕೂರಿಸಲು ಆರ್.ಪಿ.ಜಗದೀಶ್ ಪ್ರಯತ್ನಿಸಿರುವುದು ಸಹ ಸಿಎಂ ಗಮನಕ್ಕೆ ಬಂದಿರುವುದು.. ಇದರಿಂದೆ ಮುಂದೆ ತಮ್ಮ ಮೇಲೆ ಮಾಧ್ಯಮ ಮಿತ್ರರು ಮುನಿಸಿಕೊಂಡಾರು ಎಂಬ ಜಾಣತನವನ್ನು ಸದಾನಂದ ಗೌಡರು ತೋರಿಸಿದ್ದಾರೆ. ಇದರಿಂದ ಅಕಾಡೆಮಿಯಿಂದ ಪೋ ಎಂದು ಸಂದೇಶ ನೀಡಲಾಗಿದೆ.
ಪದಾಧಿಕಾರಿಗಳ ನೇಮಕವನ್ನು ರದ್ದು ಮಾಡಲು ಕಾರಣ ಸದಸ್ಯರ ಆಯ್ಕೆಯಲ್ಲಿನ ಗೊಂದಲ ಎಂದು ತಿಳಿದುಬಂದಿದೆ. ಹಿರಿಯ ವರದಿಗಾರ ಶೃಂಗೇಶ್ ಅವರಿಗೆ ನಕ್ಸಲೈಟ್ ಜೊತೆ ಸಂಬಂಧ ಇದೆ ಎನ್ನುವುದೇ ಹಿನ್ನಡೆ ಆಗಿದೆ. ಇನ್ನು ಗಂಗಾಧರ್ ಮೂದಲಿಯಾರ್ ಮತ್ತೊಮ್ಮೆ ಸದಸ್ಯರಾಗಿದ್ದು ಸರಕಾರದ ಗಮನಕ್ಕೆ ಬಂದಿದೆ. ಶಿವರಾಜ್ ತಂಗಡುರ್ ಅಕ್ರಡಿಶನ್ ಸಮಿತಿಯ ಸದಸ್ಯರಾಗಿದ್ದು ಮತ್ತೆ ಅಕಾಡೆಮಿ ಪದಾಧಿಕಾರಿಯಾಗಿದ್ದು ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಇವೆಲ್ಲ ಕಾರಣಗಳಿಂದ ಯಾವುದೇ ಗೊಂದಲವಿಲ್ಲದಂತೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲು ಸರಕಾರ ನಿಶ್ಚಯಿಸಿದೆ.
* ಈ ಹಿಂದೆ ಪ್ರಜಾ-ವಾಣಿಯ ಡಿ.ಪಿ.ಪರಮೇಶ್ವರ್ ಅಧ್ಯಕ್ಷ್ಯ ಸ್ಥಾನ ಅಲಂಕರಿಸಿದ್ದರು. ೩ ವರ್ಷದ ಸಮಯದಲ್ಲಿ ಇವರು ಸರಕಾರ ಕೊಟ್ಟ ಅನುದಾನವನ್ನು ಬಳಕೆ ಮಾಡಿಲ್ಲ ಎಂದು ಸ್ವತಹ ಮುಖ್ಯಮಂತ್ರಿಯೇ ಮಂಗಳಾರತಿ ಮಾಡಿದ್ದರು. ಮಾಧ್ಯಮ ಅಕಾಡೆಮಿಯನ್ನು ೩ ವರ್ಷ ಅಕ್ಷರಶಃ ನಿದ್ದೆ ಮಾಡುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲಬೇಕು. ಪತ್ರಿಕೂದ್ಯಮದಲ್ಲೂ ಎಷ್ಟು ಸೈಲೆಂಟ್ ಆಗಿ ನಿವ್ರತ್ತರಾದರೋ ಅಷ್ಟೇ ಸೈಲೆಂಟ್ ಆಗಿದ್ದು ಕೊಂಡೆ ಅಧಿಕಾರ ಮುಗಿಸಿ ಮನೆ ಸೇರಿದರು. ಅದು ಅವರು ಹುಟ್ಟು ಗುಣ ಕೂಡ.
* ವರದಿಗಾರ




0 Comments
You can be the first one to leave a comment.