Home » Featured »

ಮಹಿಳೆಯರು ಕುಡಿದರೆ ಮಕ್ಕಳು ಕ್ರಿಮಿನಲ್…!

 

ಬೆಂಗಳೂರು :  ಪುರುಷರು ಕುಡಿಯುವುದು ತಪ್ಪು. ಅದರಲ್ಲೂ ಮಹಿಳೆಯರು ಕುಡಿಯುವುದು ಇನ್ನೂ ತಪ್ಪು ಎಂದು ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಯನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ `ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯನ ಮಿದುಳಿನಲ್ಲಿ 9-8 ಬಿಲಿಯನ್ ಸೆಲ್ಸ್ಗಳಿರುತ್ತವೆ. ಪ್ರತಿ ಬಾರಿ ಕುಡಿದಾಗಲೂ 8-10 ಸಾವಿರ ಸೆಲ್ಸ್ಗಳು ನಾಶವಾಗುತ್ತವೆ. ಇತ್ತೀಚಿನ ಪಬ್ಗಳ ಹಾವಳಿಯಿಂದ ಮಹಿಳೆಯರೂ ಕುಡಿಯುವುದು ಕಲಿತಿದ್ದಾರೆ. ಮಹಿಳೆಯರ ಕುಡಿತದಿಂದ ಗರ್ಭದಲ್ಲಿರುವ ಮಗುವಿನ ಬ್ರೈನ್ ಸೆಲ್ಸ್ಗಳೂ ಹಾಳಾಗುವುದಲ್ಲದೆ, ಆ ಮಗು ಮುಂದೆ ಕ್ರಿಮಿನಲ್ ಆಗುವ ಅಪಾಯವಿರುತ್ತದೆ ಎಂದು ಎಚ್ಚರಿಸಿದರು.

ಕುಡಿತದಿಂದ ಶರೀರದ ಎಲ್ಲಾ ಅವಯವಗಳು ನಾಶವಾಗುತ್ತ ಹೋಗುತ್ತವೆ. ಮನುಷ್ಯ ಮತ್ತು ಪ್ರಾಣಿಗಳ ಮಧ್ಯೆ ಮುಖ್ಯ ವ್ಯತ್ಯಾಸ ಎಂದರೆ ಪ್ರಜ್ಞೆ. ಕುಡಿತ ಮನುಷ್ಯನ ಪ್ರಜ್ಞೆಯನ್ನು ಹಾಳು ಮಾಡುತ್ತದೆ. ಈ ಕಾರಣದಿಂದಲೇ ಭಾರತದಲ್ಲಿ ಸುಮಾರು 5 ಲಕ್ಷ ಮದ್ಯವ್ಯಸನಿಗಳಿಗೆ ಏಡ್ಸ್ ಸೋಂಕು ಹರಡಿದೆ. ಮದ್ಯಪಾನ ಮತ್ತು ಧೂಮಪಾನ ಚಟ ಬಿಡಿಸಲು ಔಷಧಗಳಿವೆ. ಇವುಗಳು ಪರಿಣಾಮ ಬೀರಬೇಕಾದರೆ ಚಟಕ್ಕೆ ಬಿದ್ದ ವ್ಯಕ್ತಿ ಮತ್ತು ಆತನ ಕುಟುಂಬ ಇಬ್ಬರ ಸಹಕಾರವೂ ಅಗತ್ಯ. ಮದ್ಯಪಾನ ಮಾಡುವ ವಯೋಮಿತಿಯನ್ನು ಕೇಂದ್ರ ಸರಕಾರ 18ಕ್ಕೆ ಇಳಿಸಲು ಹೊರಟಿರುವುದು ದುರಂತ ಎಂದರು.


 

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment