Home » FrontPage »

ಮತ್ತೆ ಬಿಜೆಪಿಯ ರಾಮ ಜಪ !

 

ಲಕ್ನೋ: ಚುನಾವಣೆ ಬಂದರೆ ರಾಮ ಜಪ ಆರಂಭಿಸುವ ಬಿಜೆಪಿ ಈ ಬಾರಿಯೂ ಅದನ್ನು ಮುಂದುವರಿಸಿದೆ.
ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಒಂದು ವೇಳೆ ಅಧಿಕಾರಕ್ಕೆ ಬಂದಲ್ಲಿ ರಾಮಮಂದಿರ ನಿರ್ಮಿಸಿಯೇ ತೀರುತ್ತೇವೆ ಎಂದು ಘೋಷಿಸಿದೆ.
ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರಾದ ಉಮಾಭಾರತಿ, ಸೂರ್ಯಪ್ರತಾಪ್ ಶಾಹಿ, ಕಲ್ರಾಜ್ ಮಿಶ್ರಾ, ಮುಕ್ತಾರ್ ಅಬ್ಬಾಸ್ ನಕ್ವಿ, ನರೇಂದ್ರ ಸಿಂಗ್ ತೋಮರ್ ಮತ್ತು ಸುಧೀಂದ್ರಾ ಕುಲ್ಕರ್ಣಿ ಉಪಸ್ಥಿತರಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಸೂರ್ಯ ಪ್ರತಾಪ್ ಶಾಹಿ ಮಾತನಾಡಿ, ಹಿಂದುತ್ವ ದೇಶದ ಜನಜೀವನದ ಸಂಕೇತ. ಆದರೆ, ವೋಟ್‌ಬ್ಯಾಂಕ್ ರಾಜಕಾರಣದಿಂದಾಗಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ರಾಮಮಂದಿರ ನಿರ್ಮಾಣವನ್ನು ವಿರೋಧಿಸುತ್ತಿವೆ ಎಂದು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಮಾಡಬೇಕು ಎನ್ನುವುದು ಕೋಟ್ಯಾಂತರ ಜನತೆಯ ಆಶಯ. ಆದರೆ, ದುರದೃಷ್ಟಕರ ಸಂಗತಿಯೆಂದರೆ ವೋಟ್‌ಬ್ಯಾಂಕ್ ರಾಜಕಾರಣದಿಂದ ಸಾಧ್ಯವಾಗುತ್ತಿಲ್ಲ. ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಯಾಗುವ ಅಡೆತಡೆಗಳನ್ನು ತೆಗೆಯಲು ಬಿಜೆಪಿ ಪ್ರಯತ್ನಿಸುತ್ತದೆ ಎಂದರು.
ಓಂ ಪ್ರಕಾಶ್ ಸಿಂಗ್ ಮಾತನಾಡಿ, ಧರ್ಮ ಆಧಾರಿತ ಮೀಸಲಾತಿಯನ್ನು ಬಿಜೆಪಿ ವಿರೋಧಿಸುತ್ತದೆ. ಯುಪಿಎ ಸರಕಾರ ಸದಾ ವೋಟ್‌ಬ್ಯಾಂಕ್ ರಾಜಕಾರಣ ಮಾಡುತ್ತದೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಅಲ್ಪಸಂಖ್ಯಾತರಿಗೆ ಘೋಷಿಸಲಾದ ಶೇ.4.5ರಷ್ಟು ಮೀಸಲಾತಿಯನ್ನು ತೆಗೆದುಹಾಕಿ ಇತರೆ ಹಿಂದುಳಿದ ವರ್ಗಗಳಿಗಿರುವ ಶೇ.27ರಷ್ಟು ಮೀಸಲಾತಿಯನ್ನು ಮುಂದುವರಿಸಲಾಗುತ್ತದೆ ಎಂದು ಹೇಳಿದ್ದಾರೆ.

 

Related Posts

  • No Related Posts

About the author

 
 

1 Comment

  1. k.b.rameshanayaka says:

    ramanige seetha devi mukya. adakkagi yuddavanne madtare.
    bjp leadr ge adikarada japa.
    ramana hesaru tele bittu gadduge kanasu kanatare.
    adikara sikkidre ramana bittu dropadi inde odtare.
    halappa. renukacharyy

 
 

Leave a Comment