ಬುಲ್ಬುಲ್ ಮಾತಾಡಕಿಲ್ವ
ದಶಕಗಳ ಹಿಂದೆ ತೆರೆಕಂಡ ಜನಪ್ರಿಯ ನಾಗರಹಾವು ಚಿತ್ರದಲ್ಲಿನ ನಟ ಅಂಬರೀಶ್ ಅವರ ಜನಪ್ರಿಯ ಡೈಲಾಗ್ `ಬುಲ್ಬುಲ್ ಮಾತಾಡಕಿಲ್ವ’ ಇದನ್ನು ಯಾರಾದಲು ಮರೆಯಲು ಸಾಧ್ಯವೇ. ಖಂಡಿತ ಮರೆಯಲು ಸಾಧ್ಯವಿಲ್ಲ. ಚಿತ್ರರಸಿಕರ ಮನಸಿನಲ್ಲಿ ಈ ಡೈಲಾಗ್ ಅಚ್ಚಳಿಯದೆ ಉಳಿದುಬಿಟ್ಟಿದೆ. ಇದೀಗ ಆ ಡೈಲಾಗ್ ಅನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಮಾಡಿಕೊಂಡು ನಟ ದರ್ಷನ್ ಅಭಿನಯದ ಚಿತ್ರ ಸೆಟ್ಏರಿದೆ. ಮೊನ್ನೆ ದರ್ಷನ್ ಅವರ ಹುಟ್ಟುಹಬ್ಬದಂದು ಚಿತ್ರದ ಮುಹೂರ್ತ ನಡೆಯಿತು. ಚಿತ್ರದಲ್ಲಿ ನಟ ಅಂಬರೀಶ್, ದರ್ಷನ್ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಹೆಸರು ಬುಲ್ಬುಲ್ ಮಾತಾಡಕಿಲ್ವ ಎಂದಾದರೂ ಚಿತ್ರ ಸ್ವಮೇಕ್ ಅಲ್ಲ. ತೆಲುಗಿನ ಡಾರ್ಲಿಂಗ್ ಚಿತ್ರದ ರಿಮೇಕ್. ಆದರೆ ಚಿತ್ರವನ್ನು ಯಥಾವತ್ತಾಗಿ ಕನ್ನಡಕ್ಕೆ ಭಟ್ಟಿ ಇಳಿಸುತ್ತಿಲ್ಲ. ಬದಲಾಗಿ ಕನ್ನಡದ ನೇಟಿವಿಟಿಗೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ ಎಂದು ಎಲ್ಲ ರಿಮೇಕ್ ಮಾಡುವವರು ಹೇಳುವಂತೆ ದರ್ಷನ್ ಕೂಡ ಹೇಳಿಕೊಂಡರು.
ಚಿತ್ರಕ್ಕೆ ಆರು ಮಂದಿ ನಿರ್ಮಾಪಕರು. ಮೀನಾ ತೂಗುದೀಪ್, ದಿನಕರ್ ತೂಗುದೀಪ್, ವಿ. ಹರಿಕೃಷ್ಣ, ಎ.ವಿ. ಕೃಷ್ಣಕುಮಾರ್, ಕವಿರಾಜ್ ಮತ್ತು ನಿದರ್ೇಶಕ ಎಂ.ಡಿ. ಶ್ರೀಧರ್. ನಟ ದರ್ಷನ್ ಚಿತ್ರಕ್ಕೆ ಫ್ರೀ ಕಾಲ್ಶೀಟ್ ಕೊಟ್ಟಿದ್ದಾರಂತೆ ಈ ಆರು ಮಂದಿ ದುಡ್ಡುಹಾಕಿ ಬಂದಿದ್ದರಲ್ಲಿ ಎಲ್ಲರೂ ಸಮಾನವಾಗಿ ಹಂಚಿಕೊಳ್ಳುತ್ತಾರಂತೆ. ಅಂದು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದ ಸುದೀಪ್, ಅಂಬರೀಶ್ ಎಲ್ಲರೂ ದರ್ಷನ್ಗೆ ಶುಭ ಕೋರಿದರು. ಚಿತ್ರದ ಗಳಿಕೆಯನ್ನು ಗೆಳೆಯರಿಗೆ ಹಂಚುವ ದರ್ಷನ್ ನಿರ್ಧಾರ ನಿಜಕ್ಕೂ ಒಳ್ಳೆಯದು. ಅದು ಅವರ ಹೃದಯ ವೈಶ್ಯಾಲ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಕೊಂಡಾಡಿದರು ಅಂಬರೀಶ್. ಇದೇ ಸಂತೋಷ ದರ್ಷನ್ ಜೀವನದಲ್ಲಿ ಮುಂದಿನ ದಿನಗಳಲ್ಲಿ ಇರಲಿ ಎಂದು ಹರಸಿದರು ಅವರು.
ನಾಗರಹಾವು ಚಿತ್ರದಲ್ಲಿನ ತಮ್ಮ ಜಲೀಲ್ ಪಾತ್ರದ ಬಗ್ಗೆ ಕೇಳಿದಾಗ ಅಂಬರೀಶ್ ಹಳೆಯದು ಮಧುರ ನೆನಪು. ಆ ನೆನಪುಗಳನ್ನು ಕೆಣಕುವುದು ಬೇಡ ಎಂದು ಜಾರಿಕೊಂಡರು. ಅಂಬರೀಶ್ ಅಪ್ಪಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರಕ್ಕೆ ಮೆರುಗು ನೀಡಲಿದ್ದಾರೆ. ಅಂಬರೀಶ್ ಮತ್ತು ದರ್ಷನ್ ಕಾಂಬಿನೇಶನ್ಗೆ ಗೀತರಚನೆಕಾರ ಕವಿರಾಜ್ ಗೀತೆಯೊಂದನ್ನು ಬರೆದಿದ್ದಾರೆ. ಸಣ್ಣದಾಗಿ ಶುರುವಾದ ಚಿತ್ರದ ಐಡಿಯಾ ಇದೀಗ ದೊಡ್ಡದಾಗಿದೆ. ಇದಕ್ಕೆ ಸಾಥ್ ನೀಡಿದ ಅಂಬರೀಶ್ ಅವರಿಂದ ನಮಗೆ ಆನೆಬಲ ಬಂದಂತಾಗಿದೆ ಎಂದು ಹೇಳಿಕೊಂಡರು ದಿನಕರ್ ತೂಗುದೀಪ್.
ಸಿಕ್ಕಾಪಟ್ಟೆ ಅಭಿಮಾನಿಗಳ ಸಮ್ಮುಖದಲ್ಲಿ ಹೊಸ ಚಿತ್ರದ ಮುಹೂರ್ತ ಹಾಗೂ ಹುಟ್ಟುಹಬ್ಬವನ್ನು ಆಚರಿಸಿಕೊಂಡ ದರ್ಷನ್, ಹೆಂಡತಿ ಕೊಡಿಸಿದ ದುಬಾರಿಯ ಜಾಗ್ವಾರ್ ನೀಲಿ ಕಾರಿನಲ್ಲಿ ಅಡ್ಡಾಡಿ ಖುಷಿಯಿಂದ ಬೀಗುತ್ತಿದ್ದರು.




0 Comments
You can be the first one to leave a comment.