ಬುಲ್ಡೋಜರ್ಸ್ ಗೆ ಶರಣಾದ ಟೈಗರ್ಸ್
ಬೆಂಗಳೂರು : ಟೀಮ್ ಇಂಡಿಯಾದ ದಾಂಢಿಗರು ಅತ್ತ ವಿದೇಶಿನೆಲದಲ್ಲಿ ಬ್ಯಾಟ್ ಬೀಸಲಾಗದೆ ಮಕಾಡೆ ಮಲಗುತ್ತಿದ್ದರೆ ಇತ್ತ ಕರ್ನಾಟ ಬುಲ್ಡೋಜರ್ಸ್ ನ ಬ್ಲೂ ಬಾಯ್ಸ್ ಮಾತ್ರ ಅಂಗಳದಲ್ಲಿ ಚೆಂಡನ್ನು ಅಟ್ಟಾಡಿಸುವ ಮೂಲಕ ಸಂಕ್ರಾಂತಿ ದಿನದಂದೇ `some’ ಕ್ರಾಂತಿ ಮಾಡಿದ್ದಾರೆ.
ಸಂಕ್ರಾಂತಿ ದಿನದಂದು ನಡೆದ ಸಿಸಿಎಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ಆಟಗಾರರು ಬೌಂಡರಿಗಳ ಜತೆ ಸರಸವಾಡಿದರು. ಬೌಂಡರಿ, ಸಿಕ್ಸರ್ ಗಳ ಸುರಿಮಳೆಗೈದ ಕರ್ನಾಟಕದ ಈ ಕಲಿಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ 2ನೇ ಆವೃತ್ತಿಯ ಮೊದಲ ಪಂದ್ಯ ಗೆಲ್ಲುವ ಮೂಲಕ ಭರ್ಜರಿ ಒಪನಿಂಗ್ ಆರಂಭಿಸಿದ್ದಾರೆ.
ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಹಾಗೂ ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಪಾಲ್ಗೊಂಡಿರುವ ಬೆಂಗಾಲ್ ಟೈಗರ್ರ್ಸ್ ತಂಡದ ನಡುವೆ ಮೊದಲ ಪಂದ್ಯ ಸಂಪೂರ್ಣ ಒನ್ ಸೈಡೆಡ್ ಆಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಟ್ವೆಂಟಿ 20 ಪಂದ್ಯದಲ್ಲಿ , ಬುಲ್ಡೋಜರ್ಸ್ ತಂಡ 95 ರನ್‌ಗಳ ಅಂತರದಿಂದ ಗೆಲುವಿನ ನಗೆ ಬೀರಿತು.
- ಸೋತು ಗೆದ್ದ ಕರ್ನಾಟಕ ಬುಲ್ಡೋಜರ್ಸ್ :ಸಂಕ್ರಾಂತಿಯಂದು ನಡೆದ ಈ ಪಂದ್ಯ ಒಂದುರೀತಿಯಲ್ಲಿ ಕರ್ನಾಟಕದ ಪಾಲಿಗೆ ಸೋತು ಗೆದ್ದ ಅನುಭವ. ಹೌದು ಮೊದಲಿಗೆ ಟಾಸ್ ಸೋತ ಕರ್ನಾಟಕ ತಂಡ, ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಇದನ್ನೇ ಸದುಪಯೋಗ ಪಡಿಸಿಕೊಂಡ ಕನ್ನಡದ ಕಲಿಗಳು 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು. ಬುಲ್ಡೋಜರ್ಸ್ ತಂಡದ ಪರ ರಾಜೀವ್ (91), ಭಾಸ್ಕರ್ (75) ಹಾಗೂ ಧ್ರುವ (ಔಟಾಗದೇ 41) ರನ್ ಗಳಿಸಿ ಪ್ರೇಕ್ಷಕರನ್ನು ರಂಜಿಸಿದರು. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಹೈದರಾಬಾದಿನಲ್ಲಿ ಚೆನ್ನೈ ರೈನೋಸ್ ತಂಡದ ವಿರುದ್ಧ ಸೆಣೆಸಲಿದ್ದಾರೆ. ಇದೇ ಜ.21ರಂದು ಈ ರೋಚಕ ಪಂದ್ಯ ನಡೆಯಲಿದೆ
- ಬುಲ್ಡೋಜರ್ಸ್ ಎದುರು ಶರಣಾದ ಟೈಗರ್ಸ್ ..!
252 ರನ್ ಗಳ ಗುರಿ ಬೆನ್ನಟ್ಟಿದ ಬೆಂಗಾಲಿ ಟೈಗರ್ರ್ಸ್, 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 157 ರನ್ ಮಾತ್ರ ಗಳಿಸಿತು. ಬೌಲಿಂಗ್ ವಿಭಾಗದಲ್ಲಿ ತರುಣ್ ಚಂದ್ರ ಎರಡು ವಿಕೆಟ್ ಪಡೆದರು..




0 Comments
You can be the first one to leave a comment.