ಬರ್ತ್ ಡೇ ದಿನ ಬೆತ್ತಲು; ಆರೋಪಿ ಈಗ ಜೈಲು ಪಾಲು..!
ಸುಳ್ಯ: ಇಲ್ಲಿನ ಗ್ರಾಮತರ ಪ್ರದೇಶವಾದ ಬೆಳ್ಳಾರೆಯಲ್ಲಿ ಪ್ರಿಯತಮೆ ಬರ್ತ್ ಡೇ ಆಚರಣೆಗೆ ಬಂದ ಯುವಕ, ಬಳಿಕ ಆಕೆ ಜತೆಗೂಡಿ ಕಾಮಕೇಳಿಯಲ್ಲಿ ತೊಡಗಿದ್ದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಪರಿಣಾಮ ಈಗ ಆತ ಪೊಲೀಸ್ ವಶದಲ್ಲಿದ್ದಾನೆ.
ಸುಮಾರು ೨೩ ಹರೆಯದ ಯುವತಿ ಕಾಸರಗೋಡು ಚಟ್ಟನ್ಜಾಲ್ ಎಂಬಲ್ಲಿ ಮೆಡಿಕಲ್ ಲ್ಯಾಬ್ ನಲ್ಲಿ ಉದ್ಯೋಗಿಯಾಗಿದ್ದ ಈಕೆ, ಅಲ್ಲೇ ಸಮೀಪದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತಿದ್ದ ಯುವಕನನ್ನು ಪ್ರೀತಿಸುತ್ತಿದ್ದಳು. ಕೆಲವು ವರುಷದಿಂದ ಇವರಿಬ್ಬರ ಪ್ರೇಮ ಪ್ರಸಂಗ ಮನೆಯವರ ಗಮನಕ್ಕೆ ಬಾರದೆ ಸಾಗಿತ್ತು. ಆದ್ರೆ ಯುವತಿಯ ಹುಟ್ಟು ಹಬ್ಬ ಆಚರಿಸಲು ಶುಕ್ರವಾರ ಆಕೆಯ ತವರೂರು ಬೆಳ್ಳಾರೆ ಗೆ ಆ ಯುವಕ ಬಂದಿದ್ದನು. ಹುಟ್ಟು ಹಬ್ಬ ಆಚರಿಸಿ ಕಾಸರಗೋಡಿಗೆ ಮರಳುವ ಆ ಸಮಯದಲ್ಲಿ ಬೆಳ್ಳಾರೆ ಬಸ್ ನಿಲ್ದಾಣದಲ್ಲಿ ಚಕ್ಕಂದವಾಡುವ ನಿರ್ಧಾರ ಪಜೀತಿಗೆ ಕಾರಣವಾಗಿದೆ. ಈ ಜೋಡಿ ಬಹಿರಂಗವಾಗಿ ಕಾಮಕೇಳಿ ನಡೆಸುತ್ತಿದ್ದುದನ್ನು ಗಮನಿಸಿದ ನಾಗರಿಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಪರಿಣಾಮ ಆರೋಪಿ ಯುವಕ ಮಹಮ್ಮದ್ ಆರಿಫ್ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ.




0 Comments
You can be the first one to leave a comment.