Home » Uncategorized »
ಬಚ್ಚನ್ ಇನ್ನೂ ಆಸ್ಪತ್ರೆಯಲ್ಲಿ
ಹೊಸದಿಲ್ಲಿ : ಉದರ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮೇರು ನಟ ಅಮಿತಾಭ್ ಬಚ್ಚನ್ ಇನ್ನೂ ನೋವು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಬಿಡುಗಡೆ ವಿಳಂಬವಾಗುವ ಸಾಧ್ಯತೆ ಇದೆ.
`ಬೆಳಗ್ಗೆ ದುಸ್ವಪ್ನವೆಂಬಂತೆ ಸರ್ಜರಿ ಆದ ಜಾಗದಲ್ಲಿ ನೋವು ಕಾಣಿಸಿಕೊಂಡು ಚೀರಾಡುವಂತಾಗಿತ್ತು. ವೈದ್ಯರು ತಕ್ಷಣ ಉಪಚರಿಸಿ ನೋವು ನಿವಾರಕ ಗುಳಿಗೆ ನೀಡಿದರು. ಈಗ ಸ್ವಲ್ಪ ಆರಾಮವೆನಿಸಿದೆ. ಆದರೆ ಕಳೆದ ದಿನಗಳಲ್ಲಿ ಅನುಭವಿಸಿದ ನೋವನ್ನು ಸಹಿಸುವುದಕ್ಕಿಂತ ಈ ಬಾರಿಯ ನೋವು ಸಹಿಸುವ ಶಕ್ತಿ ವೃದ್ಧಿಸಿರುವ ತೃಪ್ತಿಯಿದೆ ‘ ಎಂದು ಬಚ್ಚನ್ ಬಿಗ್ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.




0 Comments
You can be the first one to leave a comment.