Home » Featured »

ಪ್ರೊ . ಶಿವಬಸವಯ್ಯ ವಜಾಕ್ಕೆ ಆಗ್ರಹಿಸಿ ರಾಜಭವನ ಚಲೋ ಬೆದರಿಕೆ

 

ಮೈಸೂರು : ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ  ಸರಿತಾಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಪ್ರೋಫೆಸರ್ ಶಿವ ಬಸವಯ್ಯ ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ವಿವಿಧ ಪ್ರಗತಿಪರ ಹಾಗೂ ಕನ್ನಡ ಪರ ಸಂಘಟನೆಗಳು ಭಾಗವಹಿಸಿ ಬೆಂಬಲ ವ್ಯಕ್ತ್ರಪಡಿಸಿದವು.

ಮೈಸೂರು ವಿವಿ  ಸಿಂಡಿಕೇಟ್,  ಪ್ರೊ.ಶಿವಬಸವಯ್ಯ ಅವರ 9 ಇನ್ಕ್ರೀಮೆಂಟ್ ಕಡಿತಗೊಳಿಸಿ ಅವರನ್ನು ಚಾಮರಾಜನಗರ ಪಿಜಿ ಕೇಂದ್ರಕ್ಕೆ ವರ್ಗಾವಣೆ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಇದನ್ನು ಖಂಡಿಸಿ ಇಂದು ಪ್ರತಿಭಟನೆ ನಡೆಸಲಾಯಿತು.  ಕೆಲ ತಿಂಗಳುಗಳ ಹಿಂದೆಯಷ್ಟೆ ಮೈಸೂರು ವಿವಿ ಸಿಂಡಿಕೇಟ್, ಶಿವಬಸವಯ್ಯ ಅವರ  ಅಮಾನತ್ತನ್ನು ಹಿಂಪಡೆದು ಅವರನ್ನು ಪ್ರಸಾರಂಗ ವಿಭಾಗದ ಪ್ರಭಾರ ನಿರ್ದೇಶಕರನ್ನಾಗಿ ನೇಮಕ ಮಾಡಿತ್ತು.   ಸಿಂಡಿಕೇಟ್ ಸಭೆಯ ಈ  ನಿರ್ಧಾರದ ವಿರುದ್ಧ  ಸರಿತಾ ಆಗ ಬೀದಿಗಿಳಿದು ಹೋರಾಟ ನಡೆಸಿದ್ದರು.  ಈ  ಹೋರಾಟಕ್ಕೆ ವಿವಿಧ ಪ್ರಗತಿಪರ, ಕನ್ನಡ ಪರ ಸಂಘಟನೆಗಳು ಆಗಲೂ ಸಹ ಬೆಂಬಲ ವ್ಯಕ್ತಪಡಿಸಿದ್ದವು. ಈಗ ಮತ್ತೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ನಡೆಸಲಾಗುತ್ತಿದೆ.

  • ರಾಜಭವನ ಚಲೋ  ಚಳವಳಿ ;

 ರಾಜ್ಯಪಾಲರು ಈ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ಈ ಘಟನೆಗೆ ಸಂಬಂಧಿಸಿದಂತೆ ಗೌರ್ನರ್ ಅವರಿಗೂ ಸಂಪೂರ್ಣ ಮಾಹಿತಿ ತಿಳಿದಿದೆ. ಆದರೂ ಮೌನವಹಿಸಿರುವುದು ಆಶ್ಚರ್ಯ ಮೂಡಿಸಿದೆ. ಈ ಕೂಡಲೇ    ಆರೋಪಿ ಪ್ರಾಧ್ಯಾಪಕನನ್ನು ವಜಾಗೊಳಿಸುವಂತೆ ಸೂಚಿಸಬೇಕು. ತಪ್ಪಿದಲ್ಲಿ ವಾರದ ಬಳಿಕ ರಾಜಭವನ ಚಲೋ ಚಳವಳಿ ನಡೆಸಬೇಕಾಗುತ್ತದೆ  ಎಂದು ಡಾ. ವಿಜಯ್ ಕುಮಾರ್ ಒತ್ತಾಯಿಸಿದರು.

—————————-


 

Related Posts

  • No Related Posts

About the author

 
 

2 Comments

  1. k.b.rameshanayaka says:

    yavdo uddesha ittu media kuda sarita prkarana balasikolluttide.

  2. k.b.rameshanayaka says:

    sarita avarige neya sigbeku nija. sikkede. iadara naduve sakastu dalita henmakkala jevna halagta ide. yaru matadta illa

 
 

Leave a Comment