ಪ್ರೇಮಿಗಳ ಪ್ರೇಮ ನಿವೇಧನೆಗೆ ಒಲಿದು ಬಂದಿದೆ ತುಲಿಪ್ ಹೂ..!
ಮೈಸೂರು : ನಾಳೆ ಪ್ರೇಮಿಗಳ ದಿನಾಚರಣೆ. ಹದಿಹರೆಯದ ಯುವ ಜೋಡಿಗಳಿಗೆ ಪ್ರೇಮ ನಿವೇಧನೆಗೆ ಒಂದು ಉತ್ತಮ ವೇದಿಕೆ. ಈ ಸಲುವಾಗಿಯೇ ಹೂಗಳಿಗೆ ಭಾರಿ ಬೇಡಿಕೆಉಂಟಾಗಿದೆ. ಸಾಂಸ್ಕೃತಿಕ ನಗರಿಯಲ್ಲಿ ಈ ವರ್ಷ ವಿದೇಶಿ ಹೂ ತುಲಿಪ್ ಗೆ ಡಿಮ್ಯಾಂಡ್ ಹೆಚ್ಚಾಗಿದೆ.
ಜಗತ್ತಿನ ಯಾವ ಜಾಗವೇ ಆಗಲಿ ಅಲ್ಲೊಂದು `ಅಮರ’ ಪ್ರೇಮಕಥೆ ಇದ್ದೆ ಇರುತ್ತದೆ. ಈ ಕಾರಣಕ್ಕೆ ಪ್ರೇಮ ಸರ್ವಂತರಯಾಮಿ ಅನ್ನೋದು. ಇಂಥ ಪ್ರೇಮ ನಿವೇಧನೆಗೂ ಒಂದು ದಿನವಿದೆ. ಅದೇ ಫೆ.14 ಪ್ರೇಮಿಗಳ ದಿನಾಚರಣೆ. ಈ ದಿನಕ್ಕಾಗಿಯೇ ಅದೆಷ್ಟೋ ಯುವ ಜೀವಗಳು ಕಾಯುತ್ತಿರುತ್ತವೆ. ಅಂದು ಪ್ರೇಮದ ವಿಷಯ ಪ್ರಸ್ತಾಪಿಸಲೇ ಬೇಕು ಎಂಬ ಹಠಕ್ಕೆ ಬಿದ್ದಿರುತ್ತಾರೆ. ಇಂಥ ಹಠ ಪ್ರೇಮಿಗಳಿಗೆ ಸಾಥ್ ನೀಡುವುದೇ ಹೂ. ಅರಮನೆ ನಗರಿಯಲ್ಲಿ ಈ ಬಾರಿ ಗುಲಾಬಿ ಹೂ ಜತೆಗೆ ವಿದೇಶಿ ಹೂವಿನ ಘಮಲು ತುಸು ಹೆಚ್ಚಾಗಿಯೇ ಪಸರಿಸುತ್ತಿದೆ.
ಹೂ ಸೌಂಧರ್ಯಕ್ಕೆ ಮನ ಸೋಲದವರು ಯಾರು..? ಅದರಲ್ಲೂ ಮೆಚ್ಚಿನ ಪ್ರಿಯಕರ ಅಥವಾ ಪ್ರಿಯತಮೆ ನೀಡಿದಾಗ ಅದರ ಸೌಂಧರ್ಯ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿರು. ಈ ಕಾರಣಕ್ಕಾಗಿಯೇ ವ್ಯಾಲೆಂಟೈನ್ಸ್ ದಿನದಂದು ಹೂಗಳಿಗೆ ದುಪ್ಪಟ್ಟು ದರ. ಆದರೂ ಪ್ರೇಮಿಗಳು ಮಾತ್ರ ಈ ದರ ಸಮರಕ್ಕೆ ಡೊಂಟ್ ಕೇರ್ . ಹಣ ಎಷ್ಟಾದರೂ ಕೊಟ್ಟು ಹೂ ಖರೀದಿಸಿಯೇ ತೀರುತ್ತಾರೆ.
ಹೂ ಮನಸ್ಸಿನ ಪ್ರೇಯಸಿಗೆ ಹೂವಿನ ಕಾಣಿಕೆ ನೀಡುವ ಅಧ್ಬುತ ಸಮಯ ಈ ವ್ಯಾಲೆಂಟೇನ್ಸ್ ಡೇ. ಇದು ಯುವಕರ ಎದೆಯಲ್ಲಿ ಪ್ರೀತಿಯ ಹುಚ್ಚು ಹೊಳೆಹರಿಸುವ ಕಾಲ. ಆದ್ದರಿಂದ ನಾಳೆ ಯುವ ಜೋಡಿಗಳು ಪೂರ್ವ ನಿಗಧಿತ ಬಣ್ಣದಹೂಗಳ ಜತೆ ಪ್ರೇಮದ ಡ್ರೆಸ್ ಕೋಡ್ ಧರಿಸಿಕೊಂಡು ಪ್ರೀತಿ ನಿವೇಧಿಸಲು ತುದಿಗಾಲಲ್ಲಿ ನಿಂತಿರುತ್ತಾರೆ.




0 Comments
You can be the first one to leave a comment.