ಪಾಲಿಕೆ ಆಯುಕ್ತರ ಅವಾಂತರ ; ಸಾವಿರಪಟ್ಟು ಹೆಚ್ಚಿಸಿದರು ರಹದಾರಿ ಶುಲ್ಕ…!
ಮೈಸೂರು : ಮಹಾನಗರ ಪಾಲಿಕೆಗೂ ಅವಾಂತರಕ್ಕೂ ಒಂದಲ್ಲ ಒಂದು ಸಂಬಂಧ. ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿರುವ ಆಯುಕ್ತರು, ಐಷಾರಾಮಿ ಬಂಗಲೆ ಕಟ್ಟಿಸಿಕೊಳ್ಳುವ ಮೂಲಕ ವಿವಾದ ಸೃಷ್ಠಿಸಿದ್ದರು. ಇದೀಗ ಶೇ.1000 ಪಟ್ಟು ರಹದಾರಿ ಶುಲ್ಕ ಹೆಚ್ಚಿಸುವ ಮೂಲಕ ವಾಣಿಜೋದ್ಯಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಬಿ.ಎಸ್.ರಾಯ್ಕರ್ ನಗರದ ಅಭಿವೃದ್ಧಿಗೆ ಸ್ಪಂಧಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ವಿವಾದಗಳಿಗೆ ಮಾತ್ರ ಸದಾ ಮುಕ್ತವಾಗಿರುತ್ತಾರೆ. ಕೋಟಿ ವೆಚ್ಚದ ಬೃಹತ್ ಬಂಗಲೆ ಕಟ್ಟಿಸಿಕೊಂಡ ಅವಾಂತರ ಮರೆಯುವ ಮುನ್ನವೇ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಈ ಬಾರಿ ಅವರು ಮೈಸೂರಿನ ವಿವಿಧ ವಾಣಿಜೋದ್ಯಮಿಗಳ ವೈರತ್ವ ಕಟ್ಟಿಕೊಂಡಿದ್ದಾರೆ.
200 ರೂ.ಗಳಿದ್ದ ರಹದಾರಿ ಶುಲ್ಕವನ್ನು 20,000 ರೂಗೆ, 300 ರೂ ಶುಲ್ಕವನ್ನು 30,000 ರೂಗೂ ಹಾಗೂ 500 ರೂ ಶುಲ್ಕವನ್ನು50,000 ರೂಗೂ ಹೆಚ್ಚಳ ಮಾಡಲಾಗಿದೆ. ಒಟ್ಟಾರೆ ಹಾಲಿ ಜಾರಿಯಲ್ಲಿದ್ದ ರಹದಾರಿ ಶುಲ್ಕದ ಶೇ.1000 ಪಟ್ಟು ಹೆಚ್ಚಿಸುವ ಮೂಲಕ ಈ ವರ್ಗದ ಜನತೆಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ ಪಾಲಿಕೆ ಆಯಕ್ತರು.
- ಆಗ ನಾವು ಬೇಕ. ಈಗ ಬೇಡವ..?
ಮೈಸೂರು ಮಹಾನಗರ ಪಾಲಿಕೆ ಏರಿಸುವ ರಹದಾರಿ ಶುಲ್ಕ ಸಂಪೂರ್ಣ ಅವೈಜ್ಞಾನಿಕವಾದದ್ದು. ಬಹುಶಃ ದೇಶದ ಯಾವುದೇ ನಗರ ಪಾಲಿಕೆಯೂ ಈ ಪ್ರಮಾಣದಲ್ಲಿ ಶುಲ್ಕ ಹೆಚ್ಚಳ ಮಾಡಿಲ್ಲ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅಲ್ಲಿನ ಮಹಾನಗರ ಪಾಲಿಕೆ ಸಹ ಈ ಪ್ರಮಾಣದಲ್ಲಿ ಶುಲ್ಕ ನಿಗಧಿಗೊಳಿಸಿಲ್ಲ. ಈಎಲ್ಲಾ ಅಂಶಗಳನ್ನು ಪರಿಗಣಿಸಿ ಶುಲ್ಕ ಇಳಿಕೆ ಮಾಡುವಂತೆ ಮನವಿಮಾಡಲಾಗಿದೆ.ಆದರೆ ಯಾವುದೇ ಪ್ರಯೋಜನವಾಗಿಲ್ಲ. ಮೈಸೂರು ಬಂದ್ ಮಾಡುವ ಮೂಲಕವಾದರು ಬೇಡಿಕೆ ಈಡೇರಿಕೆಗೆ ಯತ್ನಿಸುವುದಾಗಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ರಾಜೇಂದ್ರ ಎಚ್ಚರಿಸಿದ್ದಾರೆ.
ಏನಾದರೂಸಮಸ್ಯೆ ಬಂದಾಗ, ಬರ- ಪ್ರವಾಹ ಉಂಟಾದಾಗ, ದಸರಾ ಮಹೋತ್ಸವ ಬಂದಾಗಲೆಲ್ಲ ಹೋಟೆಲ್ ಉದ್ಯಮಿಗಳು ಜಿಲ್ಲಾಡಳಿತಕ್ಕೆ, ಅಧಿಕಾರಿಗಳಿಗೆ ನೆನಪಾಗುತ್ತಾರೆ. ಬೇರೆ ಸಮಯದಲ್ಲಿ ಮಾತ್ರ ನೆನಪಾಗುವುದಿಲ್ಲ. ಕೇಂದ್ರ ಸರಕಾರದ ಜೆ- ನರ್ಮ್ ಯೋಜನೆಯಡಿ ಕೋಟಿಗಟ್ಟಲೇ ಹಣ ಉಪಯೋಗಿಸುವ ಅವಕಾಶ ಬಂದಾಗ ನಮ್ಮಸಲಹೆ ಪಡೆಯಬಹುದಿತ್ತು. ಆದರೆ ಕಡೆಗಣಿಸಲಾಯಿತು. ಇದು ಮನಸ್ಸಿಗೆ ನೋವುಂಟು ಮಾಡಿದೆ ಎಂದು ರಾಜೇಂದ್ರ ಅಸಮಧಾನ ವ್ಯಕ್ತಪಡಿಸಿದರು.




0 Comments
You can be the first one to leave a comment.