ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುದೀಪ್ `ವೀರ’ ಮದಕರಿ..!
ಬೆಂಗಳೂರು : ಕರ್ನಾಟಕ ಬುಲ್ದೋಝರ್ ಹಾಗೂ ಮುಂಬೈ ಹಿರೋಸ್ ತಂಡದ ನಡುವೆ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ 10 ನೇ ಪಂದ್ಯದಲ್ಲಿ ಕರ್ನಾಟಕ ವಿನ್ ಆಗಿದೆ. ಬಹಳ ರೋಚಕ ರೀತಿಯಲ್ಲಿ ಸಾಗಿದ ಈ ಪಂದ್ಯದ ಕೊನೆಯ ಘಟ್ಟದಲ್ಲಿ ಕಿಚ್ಚನ ಹುಡುಗರು ಮುಂಬೈ ತಂಡವನ್ನ ಸೋಲಿಸುವಲ್ಲಿ ಯಶಸ್ವಿ ಯಾದರು.
ಟಾಸ್ ಗೆದ್ದ ಕರ್ನಾಟಕ ಬುಲ್ಡೋಜರ್ಸ್ ಕಿಚ್ಹನ ಪಡೆ ಹುಡುಗರು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಗೆ 168 ರನ್ ಗಳ ಮೊತ್ತ ಪೇರಿಸಿದರು. ಕರ್ನಾಟಕ ಪರ `ಜಾಲಿ ಡೇಸ್’ ಚಿತ್ರದ ನಾಯಕ ಪ್ರದೀಪ್ ಆಕರ್ಷಕ 57 ರನ್ ಗಳನ್ನು ಗಳಿಸಿದರು. ಧ್ರುವ 28 ಹಾಗು ಕಾರ್ತಿಕ್ 22 ರನ್ ಗಳ ಕೊಡುಗೆ ಸಲ್ಲಿಸಿದರು. ಕರ್ನಾಟಕದ ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಕೊನೆಕ್ಷಣದಲ್ಲಿ ಮುಗ್ಗರಿಸಿತು. ಮುಂಬೈ ಪರ ಬೋದೊಲ ಮತ್ತೊಮ್ಮೆ ಬ್ಯಾಟಿಂಗ್ ನಲ್ಲಿ ಮಿಂಚಿ 50 ರನ್ ಗಳ ಕೊಡುಗೆ ನೀಡಿದರು . ಕೊನೆ ಕ್ಷಣದ ತನಕ ಹೋರಾಡಿದ ಅಪೂರ್ವ ಬಿರುಸಿನ 26 ರನ್ ಗಳಿಸಿ ಕಿಚ್ಹ ಸುದೀಪ್ ನ ಅದ್ಬುತ ರನ್ ಔಟ್ ಗೆ ಬಲಿಯಾದರು. ಕರ್ನಾಟಕ ತಂಡಕ್ಕೆ ತೀವ್ರ ಪೈಪೋಟಿ ನೀಡಿದ ಮುಂಬೈ ಕೊನೆಗೂ ಒಂದು ಎಸೆತ ಬಾಕಿ ಇರುವಂತೆ 155 ರನ್ ಗಳಿಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡು 13 ರನ್ ಗಳ ಸೋಲನ್ನು ಅನುಭವಿಸಿತು.
* ಮಿಂಚಿದ ಪ್ರದೀಪ್ :
ಕರ್ನಾಟಕ ಪರ ಬೌಲಿಂಗ್ ನಲ್ಲಿ ಮಿಂಚಿದ ಪ್ರದೀಪ್ 2 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪುರಸ್ಕಾರವನ್ನು ತನ್ನ ಮಡಿಲಿಗೆ ಹಾಕಿ ಕೊಂಡರು . ಕಾಶೀನಾಥ್ ಅವರ ಪುತ್ರ ಅಭಿಮನ್ಯು ಎಸೆದ 19 ನೇ ಓವರ್ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಆ ಓವರ್ ನಲ್ಲಿ ಅಭಿಮನ್ಯು ಅತ್ಯುತ್ತಮ ಎಸೆತೆಗಳನ್ನ ಎಸೆದು ಮುಂಬೈ ತಂಡದ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಮುಂದಿನ ಫೆಬ್ರವರಿ ೫ ರಂದು ಕೊಚ್ಚಿ ಯಲ್ಲಿ ನಡೆಯುವ ಪಂದ್ಯದಲ್ಲಿ ಕರ್ನಾಟಕ ಬುಲ್ದೋಝರ್ ತಂಡವು ಕೇರಳ ತಂಡವನ್ನು ಎದುರಿಸಲಿದೆ.




0 Comments
You can be the first one to leave a comment.