Home » FrontPage »

ಕೊಚ್ಚಿಯಲ್ಲಿ ಮುಂಬೈ ಹಿರೋಸ್ ಬಿಗ್ ಝೀರೋ

 

ಕೊಚ್ಚಿ : ಸೆಲೆಬ್ರಿಟಿ ಕ್ರಿಕೆಟ್ ಲೀಗ್  ಪಂದ್ಯದಲ್ಲಿ ಮೋಹನ್ ಲಾಲ್ ನಾಯಕತ್ವದ ಕೇರಳ ಸ್ತ್ರೈಕರ್ಸ್ ತಂಡ ಬಾಲಿವುಡ್ ನ ಮುಂಬೈ ಹಿರೋಸ್  ತಂಡವನ್ನು  ಭರ್ಜರಿ 10 ವಿಕೆಟ್ ಗಳಿಂದ ಬಗ್ಗು ಬಡಿಸಿತು. ತವರಿನ ನೆಲದಲ್ಲಿ ಸುಮಾರು 50 ,000 ಪ್ರೇಕ್ಷಕರ ಎದುರು ಕೇರಳ ತಂಡ ಎಲ್ಲಾ ವಿಭಾಗದಲ್ಲೂ ಮೇಲುಗೈ ಸಾಧಿಸಿ ತವರಿನ ಪ್ರೇಕ್ಷಕರು ಕುಣಿದು ಕುಪ್ಪಳಿಸುವಂತೆ ಮಾಡಿತು.

ಮುಂಬೈ ತಂಡ ಮೊದಲು ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 128  ರನ್ ಗಳ ಸಾಧಾರಣ ಮೊತ್ತವನ್ನು  ಕೂಡಿಹಾಕಿತು. ಮುಂಬೈ ಪರ ಬೋದೊಲ ಅವರು 27 ರನ್ ಗಳಿಸಿದರು. ಮುಂಬೈನ ಈ ಮೊತ್ತವನ್ನ ಬೆನ್ನು ಹತ್ತಿದ ಕೇರಳ ರಾಜೀವ್ ಪಿಳ್ಳೈ ಅವರ ಆಕರ್ಷಕ 75 ರನ್ ಗಳ ನೆರವಿನಿಂದ ಯಾವದೇ ವಿಕೆಟ್ ಕಳೆದು ಕೊಳ್ಳದೆ ವಿಜಯ ಪತಾಕೆಯನ್ನ ಹಾರಿಸಿತು.

ಪಿಳ್ಳೈ ಅವರಿಗೆ ಉತ್ತಮ ಬೆಂಬಲ ನೀಡಿದ ನವೀನ್ ಪೌಲ್ ಅಜೇಯ ೧೬ ರನ್ ಗಳನ್ನ ಗಳಿಸಿದರು . ಕೇರಳ ತಂಡಕ್ಕೆ ಬೆಂಬಲ ನೀಡಲು ಜವಾಹರ ಲಾಲ್  ಕ್ರೀಡಾಂಗಣದಲ್ಲಿ ನಿನ್ನೆ ಭಾರತಿಯ ತಂಡದ ವೇಗಿ ಶ್ರೀಶಾಂತ್ ,ನಟ  ಮಮ್ಮುಟ್ಟಿ ಸೇರಿದಂತೆ ಕೇರಳ ತಾರೆಯರ ದಂಡೇ ನೆರೆದಿತ್ತು.


 

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment