Home » Sports »

ಒಂದೇ ದಿನ 20 ವಿಕೆಟ್ ಕಳೆದುಕೊಂಡ ಜಿಂಬಾಬ್ವೆ

 

ನ್ಯೂಜಿಲೆಂಡ್ ವಿರುದ್ದ ನೆಪಿಯರ್ ನಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ ಒಂದೇ ದಿನ 20 ವಿಕೆಟ್ ಕಳೆದುಕೊಂಡು ಹೊಸ ದಾಖಲೆಯನ್ನು ಮಾಡಿದೆ. ಪಂದ್ಯದ 3ನೇ  ದಿನವಾದ ಶನಿವಾರ  5    ವಿಕೆಟ್ ಗೆ 392 ರನ್ ಗಳಿಂದ ದಿನದಾಟ ಪ್ರಾರಂಭಿಸಿ ಕಿವಿಸ್ ಪಡೆ ವಾಟ್ಲಿಂಗ್ ಅವರ ಅಜೇಯ ಶತಕದ (103 )ರನ್ ಗಳ ನೆರವಿನಿಂದ 7 ವಿಕೆಟ್ ಗೆ  495 ರನ್ ಗಳಿಸಿ ಡಿಕ್ಲೆಯರ್ ಮಾಡಿಕೊಂಡಿತು. ಇದಕ್ಕೆ ಉತ್ತರ ನೀಡಲು ಹೊರಟ ಜಿಂಬಾಬ್ವೆ 3 ಗಂಟೆ ಯ ಆಟದಲ್ಲಿ 51ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಫಾಲೋವಾನ್ ಪಡೆದು ಮತ್ತೆ 2 ನೇ  ಇನ್ನಿಂಗ್ಸ್ ಆರಂಭಿಸಿತು.

ಎರಡನೇ ಇನ್ನಿಂಗ್ಸ್ ನಲ್ಲೂ ಸಂಪೂರ್ಣ ಬ್ಯಾಟಿಂಗ್ ಮರೆತಂತೆ ಆಡಿದ ಜಿಂಬಾಬ್ವೆ ಆಟಗಾರರು 143 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡರು. ಇದರಿಂದ ಒಂದೇ ದಿನ ದಲ್ಲಿ ಎರಡು  ಬಾರಿ ಆಲ್ ಔಟ್ ಆದ ವಿಶಿಷ್ಟ ದಾಖಲೆ ಜಿಂಬಾಬ್ವೆ ಮಡಿಲಿಗೆ ಸೇರಿಕೊಂಡಿತು . ಕಿವಿಸ್ ಪರವಾಗಿ ಮಾರ್ಟಿನ್ ಒಟ್ಟು ೮ ವಿಕೆಟ್ ಪಡೆದು ಜಿಂಬಾಬ್ವೆ ಕುಸಿತದಲ್ಲಿ ಪ್ರಮುಖ ಪಾತ್ರವಹಿಸಿದರು.


 

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment