Home » FrontPage »

ಆಸೀಸ್ ಸರಣಿ ವೈಟ್‌ವಾಶ್: ದೋನಿ ಪಡೆಗೆ ಮುಖಭಂಗ

 

ಆಡಿಲೇಡ್: ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನೂ 298 ರನ್ನುಗಳ ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿರುವ ಆಸ್ಟ್ರೇಲಿಯಾ ತಂಡವು ಪ್ರವಾಸಿ ಭಾರತ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 4-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ಗೈದಿದೆ.
ಇದರೊಂದಿಗೆ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ಅವರನ್ನು ಒಳಗೊಂಡಂತೆ ದಿಗ್ಗಜರ ಪಡೆ ಮುಖಭಂಗ ಎದುರಿಸುವಂತಾಗಿದೆ. ಆ ಮೂಲಕ ವಿದೇಶದಲ್ಲಿ ಸತತ ಎರಡನೇ ಬಾರಿಯೂ ಭಾರತ ವೈಟ್‌ವಾಶ್ ಮುಖಭಂಗ ಅನುಭವಿಸಿದೆ.
ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 4-0 ಅಂತರದಲ್ಲಿ ಕಳೆದುಕೊಂಡಿದ್ದ ಭಾರತ ತಂಡವು ಆಸೀಸ್ ಸರಣಿಯಲ್ಲೂ 0-4 ಅಂತರದಲ್ಲಿ ಸೋಲು ಅನುಭವಿಸಿದೆ.
ಆಸೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲುವಿಗಾಗಿ 501 ರನ್ನುಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತ ತಂಡವು 69.4 ಓವರುಗಳಲ್ಲಿ 201 ರನ್ನುಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಳ್ಳುವ ಮೂಲಕ ಹೀನಾಯ ಸೋಲಿಗೆ ಗುರಿಯಾಗಿತ್ತು.
ನಾಲ್ಕನೇ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡಾಗಲೇ ಭಾರತದ ಸೋಲು ಬಹುತೇಕ ಖಚಿತವಾಗಿತ್ತು. ಇದರಂತೆ ಕೊನೆಯ ದಿನದಾಟದಲ್ಲಿ ಬಹುಬೇಗನೇ ಪತನಗೊಂಡ ಭಾರತೀಯ ತಂಡವು ವೈಫಲ್ಯ ಅನುಭವಿಸಿತು.

 

Related Posts

  • No Related Posts

About the author

 
 

0 Comments

You can be the first one to leave a comment.

 
 

Leave a Comment